ಬುರ್ಕಾ ಹಾಕಿಕೊಂಡು ಬಂದ ಯುವಕನೋರ್ವ ಯುವತಿಯರ ಜೊತೆ ಸಿಕ್ಕಿಬಿದ್ದ ಘಟನೆ ಕಾಸರಗೋಡು ಜಿಲ್ಲೆಯ ಕುಂಬಳೆ ಎಂಬಲ್ಲಿ ನಡೆದಿದೆ.
ಕಾಲೇಜು ಯುವತಿಯರ ಜೊತೆ ಮುಸ್ಲಿಂ ಯುವತಿಯರಂತೆ ಬುರ್ಕಾ ಧರಿಸಿದ್ದ ಯುವಕನೋರ್ವ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ. ಈ ವೇಳೆ ಗಾಳಿಗೆ ಮುಖದ ಬಟ್ಟೆ ಹಾರಿದ ಪರಿಣಾಮ ಬುರ್ಕಾ ಧರಿಸಿರೋದು ಯುವಕ ಎಂದು ಸಾರ್ವಜನಿಕರಿಗೆ ಗೊತ್ತಾಗಿದ್ದು, ಬಳಿಕ ಯುವಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.
ಆತನನ್ನು ವಿಚಾರಣೆ ನಡೆಸಿದಾಗ ಪಶ್ಚಿಮ ಬಂಗಾಳದ ನಸೀಬುಲ್ ಎಂದು ಗೊತ್ತಾಗಿದ್ದು, ಯುವತಿಯ ಜೊತೆ ಇರಲು ಈ ರೀತಿ ಮಾಡಿರೋದಾಗಿ ಬಾಯಿ ಬಿಟ್ಟಿದ್ದಾನೆ. ಧರ್ಮದೇಟು ನೀಡಿದ ಬಳಿಕ ಯುವಕನನ್ನು ಸ್ಥಳೀಯರು ಕುಂಬಳೆ ಪೋಲೀಸರಿಗೆ ಒಪ್ಪಿಸಿದ್ದಾರೆ.