ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲೇ ಕಾಡಾನೆ ಓಡಾಟ ನಡೆಸಿದ ಘಟನೆ ರವಿವಾರ ಸಂಜೆ ವೇಳೆ ನಡೆದಿದೆ.
ಕುಕ್ಕೆ ಸುಬ್ರಹ್ಮಣ್ಯ ಸಮೀಪದ ದೇವರಗದ್ದೆ ಅರಣ್ಯ ಪ್ರದೇಶದಿಂದ ಬಂದ ಒಂಟಿ ಕಾಡಾನೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯ ವ್ಯಾಸಮಂದಿರ ಬಳಿಯಿಂದ ಸುಬ್ರಹ್ಮಣ್ಯ ಮಠದ ಸಮೀಪದ ಮೂಲಕ ಸಂಚರಿಸಿ, ಮತ್ತೆ ಅರಣ್ಯ ಭಾಗಕ್ಕೆ ತೆರಳಿದೆ. ಕಾಡಾನೆ ವ್ಯಾಸಮಂದಿರದ ಸಮೀಪದಿಂದ ಹಾದು ಹೋಗುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಕಾಡಾನೆ ಕೆಲ ಹೊತ್ತು ದೇಗುಲದ ಸಮೀಪದ ಪರಿಸದಲ್ಲಿ ಸಂಚರಿಸಿ ಕಾಡಿನತ್ತ ತೆರಳಿದೆ ಎಂದು ತಿಳಿದು ಬಂದಿದೆ.
ಕಾಡಾನೆ ಜನಸಂಚಾರದ ದೇವಸ್ಥಾನ ಸಮೀಪದ ವಸತಿ, ಮಠದ ಪರಿಸರದಲ್ಲಿ ಸಂಚರಿಸಿದ್ದರಿಂದ ಆತಂಕಗೊಂಡ ಅಲ್ಲಿದ್ದವರು ಕಾಡಾನೆ ತೆರಳಿದ ಮಾರ್ಗವನ್ನು ಗಮನಿಸಿ ಅರಣ್ಯದತ್ತ ತೆರಳಿದನ್ನು ಖಚಿತಪಡಿಸಿಕೊಂಡರು. ಭಕ್ತರು ಹಾಗೂ ಸ್ಥಳೀಯರು ಕೆಲಕಾಲ ಆತಂಕಗೊಂಡ ಘಟನೆಯೂ ನಡೆದಿದೆ.