ಬ್ಯೂಟಿ ಪಾರ್ಲರ್‌ಗೆ ತೆರಳಿದ ಮಹಿಳೆ ನಾಪತ್ತೆ

ಶೇರ್ ಮಾಡಿ

ಸುಳ್ಯ ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ದಾವಣಗೆರೆ ಜಿಲ್ಲೆಯ ಚೆನ್ನಗಿರಿಯ ಮಂಗಳ ಯಾನೆ ಕಾವ್ಯಾ (28) ಎಂಬವರು ನ. 20ರಂದು ನಾಪತ್ತೆಯಾಗಿದ್ದರೆಂದು ಅವರ ಪತಿ ಸುಳ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಕೆ.ಎಂ.ವಿಕ್ರಂ ಅವರು ಮನೆಯವರ ಒಪ್ಪಿಗೆ ಮೇರೆಗೆ ಮಂಗಳ ಯಾನೆ ಕಾವ್ಯಾ ಅವರನ್ನು ನ. 7ರಂದು ಮದುವೆಯಾಗಿದ್ದು, ನ. 20ರಂದು ಮಂಗಳಾ ಯಾನೆ ಕಾವ್ಯಾ ಬ್ಯೂಟಿ ಪಾರ್ಲರ್‌ಗೆ ಹೋಗಿ ಬರುವುದಾಗಿ ತಿಳಿಸಿ ಹೋದವರು ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಾಣೆಯಾದ ಮಂಗಳಾ ಯಾನೆ ಕಾವ್ಯಾ ಅವರು 157 ಸೆ.ಮೀ. ಎತ್ತರ, ಸಾಧಾರಣ ದೃಢಕಾಯ ಶರೀರ, ಕನ್ನಡ ಭಾಷೆ ಮಾತನಾಡುತ್ತಾರೆ. ಕೂದಲು ಕಪ್ಪು ಬಣ್ಣ, ಗೋದಿ ಮೈ ಬಣ್ಣ, ಕೋಲುಮುಖ, ಕಾಫಿ ಬಣ್ಣದ ಚೂಡಿದಾರ ನೀಲಿ ಬಣ್ಣದ ಪ್ಯಾಂಟ್‌ ಧರಿಸಿದ್ದಾರೆ.

Leave a Reply

error: Content is protected !!