Mangaluru: ಹೆಲ್ಮೆಟ್‌ನಿಂದ ಬಸ್‌ನ ಗಾಜು ಒಡೆದು ಪರಾರಿಯಾದ ಸವಾರ

ಶೇರ್ ಮಾಡಿ

ಸ್ಕೂಟರ್‌ ಸವಾರನೋರ್ವ ಹೆಲ್ಮೆಟ್‌ನಿಂದ ಕೆಎಸ್ಸಾರ್ಟಿಸಿ ಬಸ್‌ನ ಗಾಜು ಒಡೆದು ಪರಾರಿಯಾದ ಘಟನೆ ರವಿವಾರ ರಾತ್ರಿ ಪಡೀಲ್‌ ಸಮೀಪದ ಅಳಪೆಯಲ್ಲಿ ಸಂಭವಿಸಿದೆ.

ಬಸ್‌ ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ ಸ್ಕೂಟರ್‌ ಸವಾರ ಅಳಪೆ ಬಳಿ ಅಡ್ಡ ಬಂದಿದ್ದಾನೆ. ಇದನ್ನು ಚಾಲಕ ಪ್ರಶ್ನಿಸಿದ್ದು ಆಗ ಸವಾರ ಬಸ್‌ಗೆ ಸ್ಕೂಟರ್‌ ಅಡ್ಡ ಇಟ್ಟು ತನ್ನಲ್ಲಿದ್ದ ಹೆಲ್ಮೆಟ್‌ನಿಂದ ಬಸ್‌ನ ಕಿಟಕಿ ಹಾಗೂ ಮುಂಭಾಗದ ಗಾಜು ಒಡೆದಿದ್ದಾನೆ. ಇದರಿಂದ ಚಾಲಕನ ಕೈಗೆ ಗಾಯವಾಗಿದೆ. ಸವಾರ ಪರಾರಿಯಾಗಿದ್ದಾನೆ.

ಚಾಲಕ ಅರುಣ್‌ ನೀಡಿದ ದೂರಿನಂತೆ ಕಂಕನಾಡಿ ಪೊಲೀಸರು ಸವಾರನ ವಿರುದ್ಧ ಸರಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ ಮತ್ತು ಸಾರ್ವಜನಿಕ ಆಸ್ತಿ ಹಾನಿ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

error: Content is protected !!