ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಆಸ್ಪತ್ರೆಗೆ ಭೇಟಿ ನೀಡಿ ಪಿಡಿಒ ಆರೋಗ್ಯ ವಿಚಾರಣೆ

ಶೇರ್ ಮಾಡಿ

ಬನ್ನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಿತ್ರಾವತಿ ಅವರಿಗೆ ಡಿ.5ರಂದು ಅವರು ಕಂಪ್ಯೂಟರ್‌ಗೆ ತಂಬ್ ನೀಡಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಸಿಡಿಲಿನ ಅಘಾತವಾಗಿದೆ. ಪರಿಣಾಮ ತನ್ನ ಬಲಕಾಲಿನ ಶಕ್ತಿಯನ್ನು ಕಳೆದುಕೊಂಡು ಅಸ್ವಸ್ಥಗೊಂಡ ಪಿಡಿಒ ಚಿತ್ರಾವತಿ ಅವರನ್ನು ಗ್ರಾ.ಪಂ.ಕಚೇರಿಯಲ್ಲಿದ್ದ ಅಧ್ಯಕ್ಷರು ಹಾಗೂ ಸದಸ್ಯರಿಬ್ಬರು ಕಾರಲ್ಲಿ ಕರೆದೊಯ್ದು ಪುತ್ತೂರು ಮಹಾವೀರ ಅಸ್ಪತ್ರೆಗೆ ದಾಖಲಿಸಿದ್ದರು.

ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಆಸ್ಪತ್ರೆಗೆ ಭೇಟಿ ನೀಡಿ ಚಿತ್ರಾವತಿ ಅವರ ಆರೋಗ್ಯವನ್ನು ವಿಚಾರಿಸಿದರು. ಈ ಸಂದರ್ಭ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ನಾಗೇಶ್ ಕೆಡೆಂಜಿ, ನಾಗೇಂದ್ರ ಬಾಳಿಗ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

Leave a Reply

error: Content is protected !!