
ನೆಲ್ಯಾಡಿ: ಕೊಣಾಲು ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ಡಿ.07 ರಂದು ನಡೆಯಿತು.
ಅಧ್ಯಕ್ಷರಾಗಿ ಎರಡನೇ ಬಾರಿಗೆ ಅವಿರೋಧವಾಗಿ ಕೆ.ಇ.ಮಹಮ್ಮದ್ ರಫೀಕ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ರೇಖಾ ಪ್ರಕಾಶ್, ಸದಸ್ಯರಾಗಿ ಗಣೇಶ್ ಟೈಲರ್, ಸಂತೋಷ್.ವೈ, ಬಾಬು ಪಾಂಡಿಬೆಟ್ಟು, ಅಶ್ರಫ್.ಕೆ.ಪಿ, ಮನೋಜ್ ಆರ್ಲ, ಯು.ಎಂ ರಶೀದ್, ಲೋಕೇಶ್ ಕಲಾಯಿ, ಅಬ್ದುಲ್ ಖಾದರ್, ನಳಿನಾಕ್ಷಿ, ನಸೀಮಾ.ಎಸ್.ಕೆ, ಮೆಗ್ದೆಲಿನ್, ಮೀನಾಕ್ಷಿ, ನಹೀಮ, ಮುಬೀನಾ, ಅಂಜು ಬೆನ್ನಿ, ಸರೋಜ ಇವರುಗಳು ಆಯ್ಕೆಯಾದರು
ಸಭೆಯಲ್ಲಿ ಶಾಲಾ ಮುಖ್ಯಶಿಕ್ಷಕಿ ಗಿರಿಜಾ.ಪಿ, ಶಿಕ್ಷಕ ವರ್ಗದವರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕೆ.ಕೆ.ಇಸ್ಮಾಯಿಲ್, ಪೋಷಕರು ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಭವಾನಿ.ಬಿ. ಎಲ್ ವಂದಿಸಿದರು






