ಉಪ್ಪಿನಂಗಡಿ: ಜೇಸಿಐ ವತಿಯಿಂದ ಡಾ.ರಾಜಾರಾಮ್ ಕೆ.ಬಿ ಅವರಿಗೆ ಅಭಿನಂದನೆ ಕಾರ್ಯಕ್ರಮ

ಶೇರ್ ಮಾಡಿ

ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿ ಘಟಕದ ಸಾಮಾನ್ಯ ಸಭೆ ರೋಟರಿ ಕ್ಲಬ್ ಸಭಾಭವನ ಉಪ್ಪಿನಂಗಡಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಜೇಸಿ ಲವೀನಾ ಪಿಂಟೊ ವಹಿಸಿದ್ದರು.

ಈ ಸಂದರ್ಭದಲ್ಲಿ 2024ನೇ ಸಾಲಿನ ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮತ್ತು ಘಟಕದ ಪೂರ್ವಾಧ್ಯಕ್ಷರಾದ ಡಾ.ರಾಜಾರಾಮ್.ಕೆ.ಬಿ.ಇವರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಿತು.

ಅಭಿನಂದನೆ ಭಾಷಣವನ್ನು ಘಟಕದ ಪೂರ್ವ ಅಧ್ಯಕ್ಷರಾದ ಜೇಸಿ ರವೀಂದ್ರ ದರ್ಬೆ ನೇರವೇರಿಸಿದರು. ಪೂರ್ವಾಧ್ಯಕ್ಷ ಜೇಸಿ ವಿಜಯ ಕುಮಾರ್ ಕಲ್ಲಳಿಕೆ ಜೇಸಿಯಲ್ಲಿ ತನ್ನ ಒಡನಾಟದ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಘಟಕದ ಸ್ಥಾಪಕ ಸದಸ್ಯರು ಮತ್ತು ಪೂರ್ವಾಧ್ಯಕ್ಷರಾದ ಜೇಸಿ ಡಾ.ಎಂ.ಆರ್.ಶೆಣೈ, ಪೂರ್ವಾಧ್ಯಕ್ಷ ಜೇಸಿ ಡಾ.ಗೋವಿಂದ ಪ್ರಸಾದ್ ಕಜೆ, ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜೇಸಿ ಪ್ರಶಾಂತ್ ಕುಮಾರ್ ರೈ, ನಿಕಟಪೂರ್ವ ಅಧ್ಯಕ್ಷ ಜೇಸಿ ಶೇಖರ್ ಗೌಂಡತ್ತಿಗೆ ಉಪಸ್ಥಿತರಿದ್ದರು.

ಉಪನ್ಯಾಸಕ ಜೇಸಿ ಮೋಹನ್ ಚಂದ್ರ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.ವಲಯ ತರಬೇತಿದಾರ, ಉಪನ್ಯಾಸಕ ಜೇಸಿ ಚೇತನ್ ಆನೆಗುಂಡಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಜೇಸಿ ಸುರೇಶ್ ವಂದಿಸಿದರು. ಜೇಸಿ ಸುಮನ್ ಬಜತ್ತೂರು ಜೇಸಿ ವಾಣಿ ವಾಚಿಸಿದರು. ಕಾರ್ಯಕ್ರಮದಲ್ಲಿ ಘಟಕದ 25 ಮಿಕ್ಕಿ ಪೂರ್ವಧ್ಯಕ್ಷರು, ಹಿರಿಯ ಕಿರಿಯ ಜೇಸಿ ಸದಸ್ಯರು, ಜೇಸಿರೇಟ್ ಅಧ್ಯಕ್ಷರುಗಳು, ವಲಯ ತರಬೇತಿದಾರರು, ಜೇಸಿ ಕುಟುಂಬದ ಸದಸ್ಯರು ಭಾಗವಹಿಸಿದ್ದರು.

  •  

Leave a Reply

error: Content is protected !!