ಶಿಕ್ಷಣ ಮತ್ತು ದೇವಾಲಯ ಎರಡು ಕಣ್ಣುಗಳು ಇದ್ದಂತೆ – ಶಾಂತರಾಮ ಗೌಡ.ಎ

ಶೇರ್ ಮಾಡಿ

ಕೊಕ್ಕಡ: ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದು ಮಾತ್ರ ಶಿಕ್ಷಣವಲ್ಲ, ಸರಕಾರಿ ಶಾಲೆಯಲ್ಲಿ ಸಿಗುವಂತಹ ಗುಣಮಟ್ಟದ ಶಿಕ್ಷಣ ಎಲ್ಲಿಯೂ ಸಿಗಲು ಸಾಧ್ಯವಿಲ್ಲ. ಅಂಕಗಳಿಕೆ ಒಂದೇ ವಿದ್ಯಾರ್ಥಿಯ ಗುರಿಯಾಗಿರಬಾರದು, ಮೌಲ್ಯಯುತವಾದ ಜೀವನಕ್ಕೆ ವಿದ್ಯೆಯು ಅತಿ ಅವಶ್ಯಕವಾಗಿದೆ. ಶಿಕ್ಷಣ ಮತ್ತು ದೇವಾಲಯ ಎರಡು ಕಣ್ಣುಗಳು ಇದ್ದಂತೆ. ಪೋಷಕರು ಶಿಕ್ಷಣ ಸಂಸ್ಥೆಗಳತ್ತ ಆಗಾಗ ಭೇಟಿ ನೀಡಿದರೆ ಉತ್ತಮ ಹಾಗೂ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಯೋಚನೆಗಳು ಇರಬೇಕು ಎಂದು ನಿವೃತ್ತ ಉಪನ್ಯಾಸಕ ಶಾಂತರಾಮ ಗೌಡ.ಎ ಹೇಳಿದರು.

ಕೊಕ್ಕಡ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾಲೇಜಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ ವಹಿಸಿ ಮಾತನಾಡಿದ ಅವರು 2006ರಲ್ಲಿ ಕೊಕ್ಕಡದಲ್ಲಿ ಪದವಿಪೂರ್ವ ಕಾಲೇಜು ಕೇವಲ 24 ವಿದ್ಯಾರ್ಥಿಗಳಿಂದ ಆರಂಭವಾಗಿದ್ದು. ಹಂತ ಹಂತವಾಗಿ ಉತ್ತಮ ಪ್ರಗತಿಯನ್ನು ಕಾಣುತ್ತಾ ಇದೀಗ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುವಂತಾಗಿದೆ. ಶಿಕ್ಷಣ ಕೇವಲ ಹುದ್ದೆಗಾಗಿ ಅಲ್ಲ, ಉತ್ತಮ ಪ್ರಜೆಯಾಗಿ ಬೆಳೆಯಲು ಕೂಡ ಸಹಕಾರಿ ಆಗಲಿದೆ. ಪದವಿಪೂರ್ವ ಶಿಕ್ಷಣವು ನಮ್ಮ ಜೀವನ ಬದಲಾವಣೆ ಮಾಡುವ ಸಮಯವಾಗಿದೆ, ಈ ಸಂದರ್ಭದಲ್ಲಿ ಕಠಿಣ ಶ್ರಮಪಟ್ಟು ಉತ್ತಮ ಯಶಸ್ಸನ್ನು ಪಡೆದಲ್ಲಿ ವಿದ್ಯಾರ್ಥಿಗಳಾದ ನಾವು ಪಣತೊಡಬೇಕು ಎಂದರು.

ವೇದಿಕೆಯಲ್ಲಿ ಕೊಕ್ಕಡ ಪ್ರೌಢಶಾಲಾ ಮುಖ್ಯಶಿಕ್ಷಕಿ ರೀನಾ.ಎಸ್ ಉಪಸ್ಥಿತರಿದ್ದರು.

ಶೈಕ್ಷಣಿಕವಾಗಿ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಉತ್ತಮವಾದ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಹಾಗೂ ಬಹುಮಾನವನ್ನು ನೀಡಿ ಗೌರವಿಸಲಾಯಿತು.

ಕಾಲೇಜಿನ ಪ್ರಾಚಾರ್ಯರಾದ ವಿಶ್ವನಾಥ.ಪಿ.ರೈ ಸ್ವಾಗತಿಸಿದರು. ಉಪನ್ಯಾಸಕರಾದ ಜ್ವಾಲಿ ಜೇಕಬ್, ಹರೀಶ್, ಅಭಿನಯ, ಕೀರ್ತನ, ಭಾಗೀರಥಿ, ಸ್ನೇಹ ಸಹಕರಿಸಿದರು. ಜಲಜಾ.ಕೆ ವಂದಿಸಿದರು. ಪ್ರದೀಪ್.ಎಂ.ಪಿ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

  •  

Leave a Reply

error: Content is protected !!