ನೆಲ್ಯಾಡಿ: ಪಡುಬೆಟ್ಟು ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ

ಶೇರ್ ಮಾಡಿ

ನೆಲ್ಯಾಡಿ: ಪಡುಬೆಟ್ಟು ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಡಿ.14ರಂದು ನೆಲ್ಯಾಡಿ ಗ್ರಾ,.ಪಂ ಅಧ್ಯಕ್ಷರಾದ ಸಲಾಂ ಬಿಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ನೆಲ್ಯಾಡಿ ಎಲೈಟ್ ರಬ್ಬರ್ ಮಾಲಕ ಶಾಜಿ.ಯು.ವಿ ಅವರು ದೀಪವನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಕ್ಷಣ ಎಂಬುದು ಬಹಳ ಶಕ್ತಿಯುತವಾದ ಆಯುಧವಾಗಿದೆ ಎಂದು ಶಿಕ್ಷಣದ ಮಹತ್ವವನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಶಾಲೆಗೆ 37,5೦೦/- ರೂಪಾಯಿ ಮೌಲ್ಯದ ಒಂದು ಕಂಪ್ಯೂಟರನ್ನು ಕೊಡುಗೆಯಾಗಿ ನೀಡಿದರು.

ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘ ನಿರ್ದೇಶಕ ಪ್ರವೀಣ್ ಕುಂಟ್ಯಾನ, ನೆಲ್ಯಾಡಿ ಹೋಟೆಲ್ ಗುರುಕೃಪಾ ಹೋಟೆಲ್ ಮಾಲಕ ಕುಶಾಲಪ್ಪ ಕೋಟ್ಯಾನ್, ಸೀಗಲ್ ಟ್ರೇಡರ್ಸ್ ಮಾಲಕರ ರಫೀಕ್ ಸೀಗಲ್, ಶೀನಪ್ಪ ಬರೆಮೇಲು, ಸುಬ್ರಹ್ಮಣ್ಯ ಶಗ್ರಿತ್ತಾಯ, ಜನಾರ್ದನ ಗೌಡ ಕಾನಮನೆ, ಶಾಲಾ ನಾಯಕ ಸೃಜನ್ ಉಪಸ್ಥಿತರಿದ್ದರು.

ನಿವೃತ್ತ ಎ.ಎಸ್‌.ಐ ಸ್ಯಾಮುವೆಲ್ ಎಂ.ಐ., ಹೊಸಮಜಲು ಅವರು 16 ಸಾವಿರ ರೂಪಾಯಿ ಮೌಲ್ಯದ ಬ್ಯಾಂಡ್ ಸೆಟ್ ಹಾಗೂ ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷರಾದ ಸಲಾಂ ಬಿಲಾಲ್, ಪಡುಬೆಟ್ಟು ವಾರ್ಡಿನ ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಪುಷ್ಪ ಚೆನ್ನಪ್ಪ, ಜಯಲಕ್ಷ್ಮಿ ಪ್ರಸಾದ್, ಪ್ರಕಾಶ್ ಪೂಜಾರಿ ಅವರ ಸಹಕಾರದಿಂದ 8,000 ಮೌಲ್ಯದ ಕ್ರೀಡಾ ಸಾಮಗ್ರಿಗಳನ್ನು ಶಾಲೆಗೆ ಹಸ್ತಾಂತರಿಸಿದರು.

ವಿದ್ಯಾರ್ಥಿಗಳಿಗೆ ವಿವಿಧ ದತ್ತಿನಿಧಿ, ಊರವರಿಗೆ ಹಾಗೂ ಹಳೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಆಟೋಟ ಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು. ಬಹುಮಾನಗಳ ಪಟ್ಟಿಯನ್ನು ದೈಹಿಕ ಶಿಕ್ಷಣ ಶಿಕ್ಷಕಿ ಲೀಲಾವತಿ.ಎಂ., ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರವಿಚಂದ್ರ ಪಡುಬೆಟ್ಟು ವಾಚಿಸಿದರು.ಶಾಲೆಗೆ ಧನಸಹಾಯ ಮಾಡಿದ ಮಹಾಪೋಷಕರನ್ನು ಸನ್ಮಾನಿಸಲಾಯಿತು.

ವಾರ್ಷಿಕೋತ್ಸವ ಅಧ್ಯಕ್ಷರಾದ ಸುರೇಶ್ ಪಡಿಪಂಡ ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯಶಿಕ್ಷಕಿ ಜೆಸಿ.ಕೆ.ಎ ಅವರು ಶಾಲೆಯ ವಾರ್ಷಿಕ ವರದಿಯನ್ನು ವಾಚಿಸಿದರು. ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶಿವಪ್ರಸಾದ್ ಬೀದಿಮಜಲು ವಂದಿಸಿದರು. ಸಹಶಿಕ್ಷಕಿ ಕಮಲಾಕ್ಷಿ.ಕೆ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಅಂಗನವಾಡಿಯ ಪುಟಾಣಿಗಳಿಂದ, ಪಡುಬೆಟ್ಟು ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಯಕ್ಷಗಾನ, ಊರವರಿಂದ ಹಾಗೂ ಹಳೆವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಧ್ವಜಾರೋಹಣ:
ಬೆಳಗ್ಗೆ ಧ್ವಜಾರೋಹಣ ಕಾರ್ಯಕ್ರಮವನ್ನು ಹಾಜಿ ಹಸನಬ್ಬ ಪ್ರಗತಿಪರ ಕೃಷಿಕರು ನೆರವೇರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಕವಾಯತು ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನೆಲ್ಯಾಡಿ ಜೆಸಿಐ ಅಧ್ಯಕ್ಷ ಸುಚಿತ್ರಾ ಬಂಟ್ರಿಯಾಲ್, ನೆಲ್ಯಾಡಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಬಾಕಿಲ, ಶಾಸ್ತರೇಶ್ವರ ದೇವಸ್ಥಾನ ಕುತ್ರಾಡಿ ಅಧ್ಯಕ್ಷರು ಸುಂದರಗೌಡ ಅತ್ರಿಜಾಲು, ಜೋನ್ ಮೊಂತೇರು,ಕಮಲ.ಕೆ, ಗುಡ್ಡಪ್ಪ ಗೌಡ , ರಫೀಕ್ ಉಳಿತೊಟ್ಟು, ಶಿವಪ್ರಸಾದ್ ದುಗ್ಗಲ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು. ಸಹಶಿಕ್ಷಕಿ ಮಮತಾ.ಸಿ.ಎಚ್ ಕಾರ್ಯಕ್ರಮ ನಿರೂಪಿಸಿದರು.

  •  

Leave a Reply

error: Content is protected !!