ನೆಲ್ಯಾಡಿ: ದಕ್ಷಿಣ ಕನ್ನಡ ಮ್ಯುಚುವಲ್ ಬೆನಿಫಿಟ್ ನಿಧಿ ಲಿಮಿಟೆಡ್‍ನ ಉಪಶಾಖೆ ಶುಭಾರಂಭ

ಶೇರ್ ಮಾಡಿ

ನೆಲ್ಯಾಡಿ: ದಕ್ಷಿಣ ಕನ್ನಡ ಮ್ಯುಚುವಲ್ ಬೆನಿಫಿಟ್ ನಿಧಿ ಲಿಮಿಟೆಡ್ ಕಡಬ ಇದರ ಉಪಶಾಖೆ ನೆಲ್ಯಾಡಿ ವಾಣಿಶ್ರೀ ಕಟ್ಟಡದ 1ನೇ ಮಹಡಿಯಲ್ಲಿ ಡಿ.18ರಂದು ಬೆಳಿಗ್ಗೆ ಶುಭಾರಂಭಗೊಂಡಿತು.

ವಾಣಿಶ್ರೀ ಕಟ್ಟಡದ ಮಾಲಕ ದಯಾನಂದ ಆಚಾರ್ಯ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿರುವ ಸಂಸ್ಥೆ ವಾಣಿಶ್ರೀ ಕಟ್ಟಡದಲ್ಲಿ ಆರಂಭಗೊಂಡಿರುವುದು ಸಂತಸ ತಂದಿದೆ. ಈ ಸಂಸ್ಥೆ ಮೂಲಕ ನೆಲ್ಯಾಡಿಯ ಜನತೆಗೆ ಉತ್ತಮ ಸೇವೆ ದೊರೆಯಲಿ. ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭಹಾರೈಸಿದರು. ಸಂಸ್ಥೆಯ ಅಧ್ಯಕ್ಷ ಎಸ್.ಸತೀಶ್ ನಾಯಕ್ ಅವರು ಮಾತನಾಡಿ, ನೆಲ್ಯಾಡಿಯಲ್ಲಿ ಉಪಶಾಖೆ ಮಾಡಬೇಕೆಂಬ ಯೋಚನೆ ಹಲವು ದಿನಗಳಿಂದ ಇತ್ತು. ಇದೀಗ ಅದು ಈಡೇರಿದೆ. ಈ ಉಪಶಾಖೆ ಯಶಸ್ವಿಯಾಗಿ ಮುನ್ನಡೆಯಲಿದೆ ಎಂಬ ಆಶಾಭಾವನೆ ಇದೆ. ಸಂಸ್ಥೆಯಲ್ಲಿ ಉಳಿತಾಯ ಖಾತೆ, ಡೈಲಿ ಡೆಪಾಸಿಟ್ ಎಕೌಂಟ್, ರಿಕರಿಂಗ್ ಡೆಪಾಸಿಟ್ ಎಕೌಂಟ್, ಫಿಕ್ಸೆಡ್ ಡೆಪಾಸಿಟ್ ಎಕೌಂಟ್, ಮಾಸಿಕ ಆದಾಯ ಯೋಜನೆ, ಚಿಟ್ ಫಂಡ್ ಸೌಲಭ್ಯಗಳಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು.

ಸಂಸ್ಥೆಯ ಉಪಾಧ್ಯಕ್ಷ ಆದಂ ಕುಂಡೋಳಿ ಅವರು ಮಾತನಾಡಿ, ತಾಲೂಕು ಕೇಂದ್ರವಾಗಿರುವ ಕಡಬ ಪೇಟೆ ಬಳಿಕ ನೆಲ್ಯಾಡಿ ಪೇಟೆಯೂ ವೇಗವಾಗಿ ಬೆಳೆಯುತ್ತಿದೆ. ನೆಲ್ಯಾಡಿಯಲ್ಲಿ ಸಂಸ್ಥೆಯ ಬೆಳವಣಿಗೆಗೆ ಇಲ್ಲಿನ ಜನರು ಸಹಕಾರ ನೀಡಬೇಕು. ಸಂಸ್ಥೆಯಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಹೇಳಿದರು. ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ಅಲ್ವಿನ್ ಜೊಯೆಲ್ ರೊಹನ್ಹಾ ಅವರು ಕಂಪ್ಯೂಟರ್ ಉದ್ಘಾಟಿಸಿ ಶುಭಹಾರೈಸಿದರು.

ಸಂಸ್ಥೆಯ ಕಾರ್ಯದರ್ಶಿ, ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರೂ ಆಗಿರುವ ಕೃಷ್ಣಪ್ಪ ಮಡಿವಾಳ, ಖಜಾಂಜಿ ಕಿರಣ್ ಬಂಗೇರ, ಜನರಲ್ ಮ್ಯಾನೇಜರ್ ಹರ್ಷಿತ್, ಸಂಸ್ಥೆಯ ರೀಜನಲ್ ಮೇನೇಜರ್ ಜೊಯಿಲಿನ್ ತೋಮಸ್, ಕಡಬ ಶಾಖಾ ಸಹಾಯಕ ವ್ಯವಸ್ಥಾಪಕಿ ಪ್ರಿಯಾ, ನೆಲ್ಯಾಡಿ ಶಾಖಾ ಮುಖ್ಯಸ್ಥ ಸೆಬಾಸ್ಟಿನ್ ಪಿ.ಪಿ., ಕಡಬ ಶಾಖಾ ಮುಖ್ಯಸ್ಥ ಸಂಜನ್, ಕಡಬ ಶಾಖೆ ಸಿಎಸ್‍ಒಗಳಾದ ದೀಪಕ್ ಬಿಳಿನೆಲೆ, ಪ್ರೀತಾ, ಲೋನ್ ಆಫೀಸರ್ ವಿಶ್ವನಾಥ, ನೆಲ್ಯಾಡಿ ಶಾಖಾ ಫೀಲ್ಡ್ ಆಫೀಸರ್ ಲಿತಿನ್ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಸೂಪರ್ ವೈಸರ್ ಪ್ರದೀಪ್ ಕುಮಾರ್ ಕೋಡಿಂಬಾಳ ಸ್ವಾಗತಿಸಿ, ನಿರೂಪಿಸಿದರು.

  •  

Leave a Reply

error: Content is protected !!