ಕೊಕ್ಕಡ : ವಾತ್ಸಲ್ಯ ಮನೆಗೆ ಅಡಿಗಲ್ಲು ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು ಅರಸಿನಮಕ್ಕಿ ವಲಯದ ವಾತ್ಸಲ್ಯ ಸದಸ್ಯರಾದ ರೇವತಿ ಅವರ ವಾತ್ಸಲ್ಯ ಮನೆ ನಿರ್ಮಾಣದ ಕೆಲಸವನ್ನು ಪ್ರಾರಂಭಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಗಣ್ಯರಾದ ಧರ್ಮರಾಜ ಅಡ್ಕಾಡಿ. ಸತೀಶ್ ಶೆಟ್ಟಿ, ಮಂಜುಳಾ ಕಾರಂತ್, ಊರಿನ ಹಿರಿಯರಾದ ಪದ್ಮಯ್ಯ ಗೌಡ, ತಾಲೂಕು ಯೋಜನಾಧಿಕಾರಿಗಳಾದ ಸುರೇಂದ್ರ, ಜ್ಞಾನವಿಕಾಸ ಸಮನ್ವಯಾಧಿಕಾರಿಯಾದ ಮಧುರಾ, ಮೇಲ್ವಿಚಾರಕರಾದ ಶಶಿಕಲಾ, ಸೇವಾಪ್ರತಿನಿಧಿ ಯಮುನಾ ಮತ್ತು ರೂಪ, ವಿಪತ್ತು ತಂಡದ ಘಟಕ ಪ್ರತಿನಿಧಿ ಆನಂದ ದನಿಲ, ಸದಸ್ಯರಾದ ಸುರೇಶ್ ಶಿಬಾಜೆ, ಅವಿನಾಶ್ ಭಿಡೆ, ನವಜೀವನ ಸದಸ್ಯರಾದ ನಾರಾಯಣ ಅವರು ಉಪಸ್ಥಿತರಿದ್ದರು.