ನೆಲ್ಯಾಡಿ: ಬಿದ್ದು ಸಿಕ್ಕಿದ ಹಣ ಹಿಂತಿರುಗಿಸಿ ಪ್ರಾಮಾಣಿಕತೆ

ಶೇರ್ ಮಾಡಿ

ನೆಲ್ಯಾಡಿ:ರಸ್ತೆಯಲ್ಲಿ ಸಿಕ್ಕಿದ 35 ಸಾವಿರ ರೂಪಾಯಿಯನ್ನು ವಾರೀಸುದಾರರಿಗೆ ಹಿಂತಿರುಗಿಸುವ ಮೂಲಕ ನೆಲ್ಯಾಡಿಯ ಎಸ್‍ಡಿಪಿಐ ಕಾರ್ಯಕರ್ತ ಶರೀಫ್‍ರವರು ಪ್ರಾಮಾಣಿಕತೆ ಮರೆದಿದ್ದಾರೆ.

ತರಕಾರಿ ವ್ಯಾಪಾರಿ ಉಪ್ಪಿನಂಗಡಿಯ ಮೋನಾಕ ಎಂಬವರು ನೆಲ್ಯಾಡಿಯಲ್ಲಿ ತಮ್ಮ 35 ಸಾವಿರ ರೂ.ಕಳೆದುಕೊಂಡಿದ್ದರು. ಎಸ್‍ಡಿಪಿಐ ನೆಲ್ಯಾಡಿ ಗ್ರಾಮ ಸಮಿತಿ ಸದಸ್ಯ ಶರೀಫ್‍ರವರಿಗೆ ಈ ಹಣ ಸಿಕ್ಕಿತ್ತು. ಶರೀಫ್‍ರವರು ಹಣ ಸಿಕ್ಕಿರುವ ಬಗ್ಗೆ ವಾಟ್ಸಪ್ ಗ್ರೂಪ್‍ಗಳಲ್ಲಿ ಸಂದೇಶ ರವಾನಿಸಿ, ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಯನ್ನು ಕೂಡ ನಮೂದಿಸಿದರು. ಕೆಲವೇ ನಿಮಿಷಗಳಲ್ಲಿ ಈ ಸಂದೇಶವು ಸುತ್ತಮುತ್ತಲಿನ ವಾಟ್ಸಾಪ್ ಗ್ರೂಪಿನಲ್ಲಿ ವೈರಲ್ ಆಗಿತ್ತು. ಹಣ ಕಳೆದುಕೊಂಡ ಮೋನಾಕರವರು ಶರೀಫ್‍ರವರನ್ನು ಸಂಪರ್ಕಿಸಿ ಹಣ ತನ್ನದೆಂದು ಖಾತರಿಪಡಿಸಿದರು. ಶರೀಫ್‍ರವರು ಹಣ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮರೆದಿದ್ದಾರೆ.

  •  

Leave a Reply

error: Content is protected !!