ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ, ಸಿ, ಟ್ರಸ್ಟ್(ರಿ) ಕಡಬ ತಾಲೂಕು ಕಡಬ ವಲಯದ ಕುಟ್ರುಪ್ಪಾಡಿ ಕಾರ್ಯಕ್ಷೇತ್ರದಲ್ಲಿ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮದಡಿಯಲ್ಲಿ ಕೃಷಿ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ ನಡೆಯಿತು.
ಪ್ರಗತಿ ಪರ ಕೃಷಿಕರಾದ ಬಾಲಕೃಷ್ಣ ಹಾರ್ಪಲ ಅವರು ಕೃಷಿ ಸ್ವ ಉದ್ಯೋಗ ಅಂದರೆ ಜೇನು ಸಾಕಾಣಿಕೆ, ತೋಟಗಾರಿಕೆ, ವೀಳ್ಯದೆಲೆ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಮಾಡುವುದರಯಿಂದ ಆಗುವ ಲಾಭಗಳ ಬಗ್ಗೆ ಮತ್ತು ತಾವು ಮಾಡುತ್ತಿರುವ ಕೃಷಿ ಸ್ವ ಉದ್ಯೋಗದ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ವಾಲ್ಯ ಒಕ್ಕೂಟದ ಅಧ್ಯಕ್ಷರಾದ ಚಂದ್ರಶೇಖರ ಗೌಡ ಹಾಗೂ ಒಕ್ಕೂಟ ಪದಾಧಿಕಾರಿಗಳು, ತಾಲೂಕು ಕೃಷಿ ಮೇಲ್ವಿಚಾರಕರಾದ ಸೋಮೇಶ್ ಸೇವಾಪ್ರತಿನಿಧಿಯಾದ ಪುಷ್ಪಲತಾ ಮತ್ತು ಪ್ರಗತಿ ಬಂಧು ಸ್ವ ಸಹಾಯ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.