ನೆಲ್ಯಾಡಿ: ವಿವೇಕಾನಂದ ಜಯಂತಿ ಕಾರ್ಯಕ್ರಮ ಆಚರಣೆ

ಶೇರ್ ಮಾಡಿ

ನೆಲ್ಯಾಡಿ: “ಭಾರತ ಎಂದರೆ ಏನು? ಎಂದು ಜಗತ್ತಿಗೆ ಪರಿಚಯಿಸಿದವರು ಸ್ವಾಮಿ ವಿವೇಕಾನಂದರು. ಅಂತಹ ಮಹಾತ್ಮರ ಅನ್ವೇಷಣಾ ಗುಣವನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕು. ತಂದೆ ತಾಯಿ ತೋರಿಸಿಕೊಟ್ಟ ಮಾರ್ಗವನ್ನು ನಾವು ಅನುಸರಿಸಬೇಕು”. ಎಂದು ರಾಮಕುಂಜ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಚೇತನ್ ಮೊಗ್ರಾಲ್ ಹೇಳಿದರು.

ನೆಲ್ಯಾಡಿ ಸೂರ್ಯನಗರ ಶ್ರೀರಾಮ ವಿದ್ಯಾಲಯದಲ್ಲಿ ಜ.13ರಂದು ನಡೆದ ವಿವೇಕಾನಂದ ಜಯಂತಿ, ಸಾಮೂಹಿಕ ಹುಟ್ಟುಹಬ್ಬ ಆಚರಣೆ, ಮಕರ ಸಂಕ್ರಮಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀರಾಮ ವಿದ್ಯಾಲಯದ ಆಡಳಿತ ಸಮಿತಿಯ ಕಾರ್ಯದರ್ಶಿಗಳಾದ ಮೂಲಚಂದ್ರ ಕಾಂಚನ ಅವರು ಮಾತನಾಡಿ “ವಿದ್ಯಾರ್ಥಿಗಳು ಶಾಲೆಯಲ್ಲಿ ಹೇಳಿಕೊಟ್ಟ ಸಂಸ್ಕಾರಗಳನ್ನು ಮನೆಯಲ್ಲಿಯೂ ಪಾಲಿಸುವಂತಾಗಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾಮುಖ್ಯಶಿಕ್ಷಕ ಗಣೇಶ್ ವಾಗ್ಲೆ ಉಪಸ್ಥಿತರಿದ್ದರು. ಅತಿಥಿಗಳು ಹುಟ್ಟುಹಬ್ಬವನ್ನು ಆಚರಿಸಿಕೊಂಡ ವಿದ್ಯಾರ್ಥಿಗಳಿಗೆ ಹಣೆಗೆ ತಿಲಕ ಹಾಗೂ ಸಿಹಿಯನ್ನು ನೀಡಿ ಶುಭ ಹಾರೈಸಿದರು. ವಿನ್ಯಶ್ರೀ ಮಾತಾಜಿ ಸ್ವಾಗತಿಸಿದರು, ಯಶೋಧ ಮಾತಾಜಿ ವಂದಿಸಿದರು. ಕಾವ್ಯ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.

  •  

Leave a Reply

error: Content is protected !!