ಕೌಕ್ರಾಡಿ ಕಾರ್ಯಕ್ಷೇತ್ರದ ಒಕ್ಕೂಟದ ತ್ರೈಮಾಸಿಕ ಸಭೆ

ಶೇರ್ ಮಾಡಿ

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ಕಡಬ ತಾಲೂಕು ನೆಲ್ಯಾಡಿ ವಲಯದ ಕೌಕ್ರಾಡಿ ಕಾರ್ಯಕ್ಷೇತ್ರದ ತ್ರೈಮಾಸಿಕ ಸಭೆಯು ಒಕ್ಕೂಟದ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಅವರ ಅಧ್ಯಕ್ಷತೆಯಲ್ಲಿ ಹೊಸಮಜಲು ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ವಲಯ ಮೇಲ್ವಿಚಾರಕರಾದ ಆನಂದ.ಡಿ.ಬಿ, ಸೇವಾಪ್ರತಿನಿಧಿ ನಮಿತಾ.ಎಸ್ ಶೆಟ್ಟಿ ಸದಸ್ಯರಿಗೆ ಮಾಹಿತಿ ನೀಡಿದರು.

ಕೌಕ್ರಾಡಿ ಕಾರ್ಯಕ್ಷೇತ್ರದ ಶಿವಾನಿ ತಂಡದ ಸದಸ್ಯರಾದ ಸುಂದರಿ ಅವರ ಮಗಳಾದ ಸೌಮ್ಯ ಇವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸೇವೆಗೆ ರಾಷ್ಟ್ರಮಟ್ಟದ ಕನ್ನಡ ಕಲರವ ಸಮ್ಮೇಳನದ ಕಾರ್ಯಕ್ರಮದಲ್ಲಿ ರಾಷ್ಟ್ರ ಮಟ್ಟದ ಕವಿರತ್ನ ಪ್ರಶಸ್ತಿಯನ್ನು ಪಡೆದ ಅವರಿಗೆ ಶಿವಾನಿ ತಂಡದ ಸದಸ್ಯರ ವತಿಯಿಂದ ತ್ರೈಮಾಸಿಕ ಸಭೆಯಲ್ಲಿ ಸನ್ಮಾನಿಸಲಾಯಿತು.

ಒಕ್ಕೂಟದ ಪದಾಧಿಕಾರಿಗಳಾದ ಕೃಷ್ಣ.ಎಂ, ಹೇಮಾವತಿ, ಹೇಮಲತಾ, ಹೇಮಾ.ವಿ, ನೆಲ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಪ್ರತಿನಿಧಿ ರಮೇಶ್ ಬಾಣಜಾಲು, ದಾಖಲಾತಿ ಸಮಿತಿ ಸದಸ್ಯರು, ಉಪಸಮಿತಿ ಸದಸ್ಯರು, ತಂಡಗಳ ಪ್ರಬಂಧಕರು, ಸಂಯೋಜಕರು ಹಾಗೆಯೇ ಸದಸ್ಯರು ಉಪಸ್ಥಿತರಿದ್ದರು. ತಂಡದ ಸದಸ್ಯರಾದ ಉಮೇಶ್ ವಂದಿಸಿದರು.

  •  

Leave a Reply

error: Content is protected !!