ನೆಲ್ಯಾಡಿ: ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಪೂರ್ವ ವಿದ್ಯಾರ್ಥಿ ಸಂಘದ ಸ್ನೇಹ ಸಂಗಮ 2025 ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಜ.11ರಂದು ಮಿಲೆನಿಯಂ ಸಭಾಂಗಣ ಸಂತ ಚಾರ್ಜ್ ಪದವಿಪೂರ್ವ ಕಾಲೇಜು ನೆಲ್ಯಾಡಿಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಇಸ್ಮಾಯಿಲ್.ಎನ್ ವಹಿಸಿ ಎಲ್ಲರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಪೂರ್ವ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಅಬ್ರಹಾಂ ವರ್ಗೀಸ್, ವಿದ್ಯಾಸಂಸ್ಥೆ ಸಂಚಾಲಕರಾದ ರೆ.ಫಾ. ನೋಮಿಸ್ ಕುರಿಯಾಕೋಸ್, ಪೂರ್ವ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ.ಕೆ ಉಪಸ್ಥಿತರಿದ್ದರು.
ಪೂರ್ವ ವಿದ್ಯಾರ್ಥಿಗಳಿಂದ ವಿವಿಧ ಆಟೋಟ ಸ್ಪರ್ಧೆಗಳು ನಡೆಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ನೂತನ ಪದಾಧಿಕಾರಿಗಳು:
ಗೌರವಾಧ್ಯಕ್ಷರಾಗಿ ಅಬ್ರಹಾಂ ವರ್ಗೀಸ್, ಅಧ್ಯಕ್ಷರಾಗಿ ಮುರಳಿ.ಎಚ್, ಉಪಾಧ್ಯಕ್ಷರಾಗಿ ಎಂ.ಐ.ಸಾಮುವೆಲ್, ಕಾರ್ಯದರ್ಶಿಯಾಗಿ ವಿಶ್ವನಾಥ ಶೆಟ್ಟಿ.ಕೆ, ಜೊತೆ ಕಾರ್ಯದರ್ಶಿಯಾಗಿ ಸುಜಾತ, ಕೋಶಾಧಿಕಾರಿಯಾಗಿ ಇಸ್ಮಾಯಿಲ್.ಎನ್, ಸಂಘಟನಾ ಕಾರ್ಯದರ್ಶಿಯಾಗಿ ವಿಮಲ್ ಕುಮಾರ್, ತೇಜಸ್ವಿನಿ.ಎ, ಗೌರವ ಸಲಹೆಗಾರರಾಗಿ ರೆ.ಫಾ.ಅನೀಶ್ ಪಾರಶೆರಿಲ್, ರೆ.ಫಾ.ನೋಮಿಸ್ ಕುರಿಯಾಕೋಸ್. ಏಲಿಯಾಸ್.ಎಂ.ಕೆ, ತೋಮಸ್.ಎಂ.ಐ, ಹರಿಪ್ರಸಾದ್.ಕೆ. ಸದಸ್ಯರಾಗಿ ರೆ.ಫಾ.ಪಿ.ಕೆ.ಅಬ್ರಹಾಂ ಕೋರ್ ಎಪಿಸ್ಕೋಪ, ಶಿವಣ್ಣ.ಪಿ ಹೆಗ್ಡೆ, ಪಿ.ಪಿ ವರ್ಗೀಸ್, ಸರ್ವೋತ್ತಮ ಗೌಡ, ಡಾ.ವಾಸಪ್ಪ ಗೌಡ, ಸಲಾಂ ಬಿಲಾಲ್, ಜಯಾನಂದ ಬಂಟ್ರಿಯಾಲ್, ಶಾಜಿ.ಯು.ಪಿ, ಸುಧೀರ್, ಜಮೀರ್ ಪಾಷಾ, ಪೂವಪ್ಪ ಕರ್ಕೇರ, ಆರತಿ, ಕೆ.ಪಿ.ಅಬ್ರಹಾಂ, ಉದಯಕುಮಾರ್, ಸಿಮಿ ಪ್ರಜ್ವಲ್, ಜೂಲಿಯಾನ ಇವರುಗಳು ಆಯ್ಕೆಯಾದರು.