ಕಡಬ: ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ, ಭಾರತ ಸಂಸ್ಕೃತಿ ಪ್ರತಿಷ್ಠಾನವು ನಡೆಸಿದ ರಾಮಾಯಣ ಮತ್ತು ಮಹಾಭಾರತ ಪರೀಕ್ಷೆಯಲ್ಲಿ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆ ಕಡಬ ಇಲ್ಲಿನ 8 ಮತ್ತು 9ನೇ ತರಗತಿಯ 13 ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.
ರಾಮಾಯಣ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕವನ್ನು ಸುಮಂತ್.ಕೆ.ಪಿ.(9ನೇ ತರಗತಿ), ಪ್ರಥಮ ಸ್ಥಾನವನ್ನು ಚಂದ್ರಮೌಳಿ.ಬಿ.(8ನೇ ತರಗತಿ), ದ್ವಿತೀಯ ಸ್ಥಾನವನ್ನು ಪ್ರಯಾಗ್.ಪಿ.ವಿ. (9ನೇ ತರಗತಿ), ತೃತೀಯ ಸ್ಥಾನವನ್ನು ಎ.ಯು.ಮನ್ಮಿತ್ (8ನೇ ತರಗತಿ) ಇವರು ಪಡೆದಿರುತ್ತಾರೆ.
ಮಹಾಭಾರತ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕವನ್ನು ಪ್ರಣಮ್ಯ.ಐ.(9ನೇ ತರಗತಿ), ಪ್ರಥಮ ಸ್ಥಾನವನ್ನು ಜಾನ್ವಿ (9ನೇ ತರಗತಿ), ದ್ವಿತೀಯ ಸ್ಥಾನವನ್ನು ಪ್ರೇಕ್ಷಾ.ಪಿ.ಎಂ. (9ನೇ ತರಗತಿ), ತೃತೀಯ ಸ್ಥಾನವನ್ನು ಹರ್ಷಿತ್ (9ನೇ ತರಗತಿ) ಇವರು ಪಡೆದಿರುತ್ತಾರೆ. ವಿದ್ಯಾರ್ಥಿಗಳಾದ ಮನೀಶ್(8ನೇ ತರಗತಿ), ಮನೋಜ್(9ನೇ ತರಗತಿ), ಮನಸ್ವಿ(9ನೇ ತರಗತಿ), ರಿಷಿತಾ (9ನೇ ತರಗತಿ) ಮತ್ತು ಕುಷಿ (8ನೇ ತರಗತಿ) ಇವರು ಭಾಗವಹಿಸಿರುತ್ತಾರೆ.
ಸಾಧನೆಗೈದ ವಿದ್ಯಾರ್ಥಿಗಳನ್ನು ಮುಖ್ಯಶಿಕ್ಷಕಿ ಕು|ಶ್ವೇತಾ ಕುಂದರ್ ಅವರು ಅಭಿನಂದಿಸಿದಿರು. ಈ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕಿ ಶ್ವೇತಾ ಕೆ.ಆರ್. ಮಾರ್ಗದರ್ಶನ ನೀಡಿರುತ್ತಾರೆ.