ಕಳೆಂಜ ಆನೆ ದಾಳಿ; ವಿಶ್ವನಾಥ ಕುಂಬಾರ ಎಂಬವರಿಗೆ ಗಾಯ

ಶೇರ್ ಮಾಡಿ

ಕಳೆಂಜ: ಕಳಂಜ ಗ್ರಾಮದ ಬಂಡೇರಿ ಸೇತುವೆ ಬಳಿ ಕಾಡಾನೆ ದಾಳಿ ನಡೆಸಿ ವಿಶ್ವನಾಥ ಕುಂಬಾರ ಎಂಬವರು ಗಾಯಗೊಂಡ ಘಟನೆ ಜ.12ರಂದು ನಡೆದಿದೆ.

ಕಳೆಂಜ ಗ್ರಾಮದ ಗೋಶಾಲೆ ಮಾರ್ಗದ ಸಮೀಪದ ಮನೆಯ ವಿಶ್ವನಾಥ ಕುಂಬಾರ ಎಂಬವರು ಮನೆಯಲ್ಲಿ ಮೊಬೈಲ್ ನೆಟ್ವರ್ಕ್ ಸಿಗದ ಕಾರಣ ಪಕ್ಕದಲ್ಲಿರುವ ಬಂಡೇರಿ ಸೇತುವೆ ಬಳಿ ಸಂಜೆ ಫೋನ್ ನಲ್ಲಿ ಮಾತನಾಡಲೆಂದು ಕುಳಿತಿದ್ದ ಸಂದರ್ಭ ಒಂಟಿ ಸಲಗವೊಂದು ಹಿಂಬದಿಯಿಂದ ಬಂದು ಸೊಂಡಿಲಿನಿಂದ ಇವರನ್ನು ತಳ್ಳಿ ಹಾಕಿದ್ದು ಘಟನೆಯಲ್ಲಿ ಸಣ್ಣ ಪುಟ್ಟ ಗಾಯಗಳಿಂದ ಅದೃಷ್ಟವಶಾತ್ ಪಾರಾಗಿದ್ದಾರೆ. ವಿಶ್ವನಾಥ್ ಅವರಿಗೆ ಕಿವಿ ಸರಿಯಾಗಿ ಕೇಳಿಸದೇ ಇರುವುದರಿಂದ ಆನೆ ಬರುತ್ತಿರುವ ಬಗ್ಗೆ ಅವರ ಗಮನಕ್ಕೆ ಬರಲಿಲ್ಲ. ಘಟನೆ ಬಳಿಕ ಅವರು ಬೊಬ್ಬೆ ಹೊಡೆಯುವುದನ್ನು ಸ್ಥಳೀಯರು ಗಮನಿಸಿ ಘಟನೆ ಬಳಿಕ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿ ಆನೆಯನ್ನು ಕಾಡಿಗೆ ಓಡಿಸಿದರು.

ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಸಂತ್ರಸ್ತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

  •  

Leave a Reply

error: Content is protected !!