ಶಿರಾಡಿ: ಕಾಡಾನೆ ದಾಳಿ-ಕೃಷಿ ಹಾನಿ

ಶೇರ್ ಮಾಡಿ

ನೆಲ್ಯಾಡಿ: ಕಳೆದ ರಾತ್ರಿ ಕಾಡಾನೆ ದಾಳಿ ನಡೆಸಿ ಕೃಷಿ ಹಾನಿಗೊಳಿಸಿರುವ ಘಟನೆ ಶಿರಾಡಿಯಲ್ಲಿ ನಡೆದಿದೆ.

ಶಿರಾಡಿ ನಿವಾಸಿಗಳಾದ ದಿವಾಕರ ಗೌಡ, ದಿನಕರ, ರವಿಶಂಕರ, ಸುಧಾಕರ, ರವಿಚಂದ್ರ, ತೋಮಸ್ ಹಾಗೂ ಇನ್ನಿತರರ ತೋಟಕ್ಕೆ ನುಗ್ಗಿದ ಕಾಡಾನೆ ಅಡಿಕೆ, ಬಾಳೆ ಸೇರಿದಂತೆ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿಗೊಳಿಸಿದೆ. ನೀರಿನ ಪೈಪ್, ಸ್ಪಿಂಕ್ಲರ್ ಗಳು ಹಾನಿಗೊಂಡಿವೆ ಎಂದು ವರದಿಯಾಗಿದೆ.

ಈ ಭಾಗದಲ್ಲಿ ಪದೇ ಪದೇ ಕಾಡಾನೆಗಳು ಕೃಷಿ ತೋಟಕ್ಕೆ ದಾಳಿ ನಡೆಸಿ ಕೃಷಿ ಹಾನಿಗೊಳಿಸುತ್ತಿದ್ದು ಆನೆಯ ಉಪಟಳದಿಂದ ಕೃಷಿಕರು ಕಂಗಲಾಗಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅರಣ್ಯ ಪಾಲಕರು, ಅರಣ್ಯ ರಕ್ಷಕರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

  •  

Leave a Reply

error: Content is protected !!