

ಜಾಗದ ದಾಖಲೆಗೆ ಲಂಚ ಕೇಳಿದ ಆಪಾದನೆ ಮೇಲೆ ಇಲ್ಲಿನ ಪಿಡಿಒ ಹಾಗೂ ಕ್ಲರ್ಕ್‌ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ಹನೀಫ್ ಅವರ ದೂರಿನ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಹನೀಫ್ ಅವರ ಜಾಗದ 9/11 ಮಾಡಿ ಕೊಡಲುಮಾಡಿಕೊಡಲು 22.000ರೂ. ಲಂಚಕ್ಕೆ ಬೇಡಿಕೆ ಇಟ್ಟ ಗಂಗೊಳ್ಳಿ ಪಿಡಿಒ ಉಮಾಶಂಕರ್ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಶೇಖರ.ಬಿ ಅವರನ್ನು ರೆಡ್ ಹ್ಯಾಂಡ್ ಆಗಿ ಬಂದಿಸಲಾಗಿದೆ.
ಲೋಕಾಯುಕ್ತ ಅಧೀಕ್ಷಕ ನಟರಾಜ್ ಅವರ ಮಾರ್ಗದರ್ಶನದಲ್ಲಿ ಪ್ರಭಾರ ಪೊಲೀಸ್ ಉಪಾಧೀಕ್ಷಕ ಮಂಜುನಾಥ್ ಅವರ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಅಮ್ಮನುಲ್ಲ ಹಾಗೂ ಚಂದ್ರಶೇಖರ ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ಲೋಹಿತ್, ಪುಷ್ಪಲತಾ, ಮಲ್ಲಿಕಾ, ಅಬ್ದುಲ್ ಜಲಾಲ್, ಸತೀಶ್ ಹಂದಾಡಿ, ರವೀಂದ್ರ ಗಾಣಿಗ, ಪ್ರಸನ್ನ ದೇವಾಡಿಗ, ರಮೇಶ್, ಸತೀಶ್ ಆಚಾರ್ಯ, ರಾಘವೇಂದ್ರ ಹೊಸಕೋಟೆ, ಸೂರಜ್ ಕಾಪು ಹಾಗೂ ಮಂಗಳೂರು ಲೋಕಾಯುಕ್ತ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಮಹಮ್ಮದ್ ಹನೀಫ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ





