
ನೆಲ್ಯಾಡಿ: ಇತ್ತೀಚೆಗೆ ನಡೆದ ಜೂನಿಯರ್ ಗ್ರೇಡ್ ಡ್ರಾಯಿಂಗ್ ಪರೀಕ್ಷೆಯಲ್ಲಿ ಅದಿತಿ.ಕೆ ಕೊಕ್ಕಡ ಅವರು ಡಿಸ್ಟಿಂಕ್ಷನ್ ಹಾಗೂ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯೊಂದಿಗೆ ಉತ್ತೀರ್ಣರಾಗಿದ್ದಾರೆ.

ಚಿತ್ರಕಲಾ ಶಿಕ್ಷಕರಾದ ಪ್ರಸನ್ನ ಐವರ್ನಾಡು ಸುಳ್ಯ ಅವರಲ್ಲಿ ಡ್ರಾಯಿಂಗ್ ಅನ್ನು ಹಾಗೂ ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಗುರುಗಳಾದ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ ಹಾಗೂ ವಿದ್ವಾನ್ ಗಿರೀಶ್ ಕುಮಾರ್ ಅವರಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಪ್ರಸ್ತುತ ಈಕೆ ಕೊಕ್ಕಡದ ಸೈಂಟ್ ಫ್ರಾನ್ಸಿಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಕೊಕ್ಕಡ ಗ್ರಾಮದ ಹಳ್ಳಿoಗೇರಿ ನಿವಾಸಿ ಶ್ರೀ ಕ್ಷೇ.ಧ.ಗ್ರಾ ಯೋಜನೆಯ ಮೇಲ್ವಿಚಾರಕ ದಿನೇಶ್.ಕೆ ಹಾಗೂ ಬಜತ್ತೂರು ಶಾಲೆ ಶಿಕ್ಷಕಿ ಪವಿತ್ರಾ ಅವರ ಪುತ್ರಿ.





