

ನೆಲ್ಯಾಡಿ: ನೆಲ್ಯಾಡಿ -ಕೌಕ್ರಾಡಿ ಮರಾಟಿ ಸಮಾಜ ಸೇವಾ ಸಂಘ ಇದರ 2025ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ಹಾಗೂ ಪದ ಸ್ವೀಕಾರ ಕಾರ್ಯಕ್ರಮವು ಜರುಗಿತು.

ಅಧ್ಯಕ್ಷರಾಗಿ ಶೀನಪ್ಪ ನಾಯ್ಕ.ಎಸ್ ಬರೆಗುಡ್ಡೆ, ಕಾರ್ಯದರ್ಶಿಯಾಗಿ ನಾರಾಯಣ ನಾಯ್ಕ ಚಾಮೆತ್ತಮೂಲೆ ಹಾಗೂ ಕೋಶಾಧಿಕಾರಿಯಾಗಿ ವಿಶ್ವನಾಥ ನಾಯ್ಕ ನಿಸರ್ಗ ಆಯ್ಕೆಯಾಗಿದ್ದಾರೆ.
ಮರಾಟಿ ಸಮಾಜ ಸೇವಾ ಸಂಘ(ರಿ) ಕೊಂಬೆಟ್ಟು, ಪುತ್ತೂರು ಇದರ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದ್ದರು. ಉಪ್ಪಿನಂಗಡಿ ಶ್ರೀಮಹಾಮ್ಮಾಯಿ ಮರಾಟಿ ಸಮಾಜ ಸೇವಾ ಸಂಘ(ರಿ) ಇದರ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ನೆಲ್ಯಾಡಿ ಆಸುಪಾಸಿನ ಒಟ್ಟು 95 ಮರಾಟಿ ಸಮಾಜ ಬಾಂಧವರು ಭಾಗವಹಿಸಿದ್ದರು.






