

ನೆಲ್ಯಾಡಿ:ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿಯ ವತಿಯಿಂದ ವಕ್ಫ್ ಆಸ್ತಿ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆ ಫೆ.21ರಂದು ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿ ಮುಂಭಾಗ ರಾಷ್ಟ್ರೀಯ ಹೆದ್ದಾರಿ ಬಳಿ ನಡೆಯಿತು.

ಜಾಫರ್ ಸಾದಿಕ್ ಪೈಝಿ ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರ ಮಾಡುತ್ತಿರುವ ತಿದ್ದುಪಡಿಯು ವಕ್ಫ್ ಸಂಸ್ಥೆಯನ್ನು ಸಂಪೂರ್ಣವಾಗಿ ನಾಶಪಡಿಸುವ, ಆಸ್ತಿ ಕಬಳಿಸುವ ಹುನ್ನಾರದಿಂದ ಕೂಡಿದೆ. ವಕ್ಪ್ ಅನ್ನುವುದು ಅಲ್ಲಾಹನದು ಇದಕ್ಕೆ ಅನ್ಯಾಯವಾಗಿದೆ ಇದನ್ನು ನಾವು ಸಹಿಸುವುದಿಲ್ಲ ಹಾಗೂ ಒಪ್ಪುವುದಿಲ್ಲ. ಈ ತಿದ್ದುಪಡಿ ಮಸೂದೆ ವಿರುದ್ಧ ದೇಶದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ ಎಂದು ಪ್ರತಿಭಟನೆಯನ್ನು ಉದ್ದೇಶಿಸಿ ಜಾಫರ್ ಸಾದಿಕ್ ಪೈಝಿ ಮಾತನಾಡಿದರು.
ಅಮರ್ ಮೊಯಿನಿ ನೀರಕಟ್ಟೆ ಮಾತನಾಡಿ ನಮ್ಮ ಹಕ್ಕನ್ನು ಕಸಿದುಕೊಳ್ಳುವುದರ ವಿರುದ್ದ ಶಾಂತಯುತವಾಗಿ ಪ್ರತಿಭಟನೆ ನಡೆಸುವುದು ನಮ್ಮ ಕರ್ತವ್ಯ. ವಕ್ಫ್ ಮಸೂದೆ ತಿದ್ದುಪಡಿಗೊಳಿಸುವ ಮೂಲಕ ಮುಸ್ಲಿಮರಿಗೆ ಬಳುವಳಿಯಾಗಿ ಬಂದಿರುವ ಆಸ್ತಿಯನ್ನು ಕಬಳಿಸುವ ಪ್ರಯತ್ನ ನಡೆಯುತ್ತಿದೆ. ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಷಡ್ಯಂತ್ರ ನಡೆಯುತ್ತಿದೆ. ಇದರ ವಿರುದ್ದ ಸಂವಿಧಾನ ಬದ್ಧ ಹೋರಾಟ ನಡೆಸಲಾಗುವುದು ಎಂದರು.
ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿ ಆಡಳಿತ ಕಮಿಟಿಯ ಲೆಕ್ಕಪರೀಶೋದಕ, ನೋಟರಿ ಮತ್ತು ನ್ಯಾಯವಾದಿ ಎನ್. ಇಸ್ಮಾಯಿಲ್ ನೆಲ್ಯಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿ ಖತೀಬಾರದ ಸೌಕತ್ ಅಲಿಅಲ್ ಅಮಾನಿ, ಅಧ್ಯಕ್ಷರಾದ ಎನ್.ಎಸ್.ಸುಲೈಮಾನ್, ಉಪಾಧ್ಯಕ್ಷ ಎಂ.ಹನೀಫ್ ಕರಾವಳಿ, ಪ್ರದಾನ ಕಾರ್ಯದರ್ಶಿ ಇಲ್ಯಾಸ್ ನೆಲ್ಯಾಡಿ, ಕಾರ್ಯದರ್ಶಿಗಳಾದ ಅಬ್ದುಲ್ ಜಬ್ಬಾರ್, ಇಸ್ಮಾಯಿಲ್ ಎಸ್ ಎಮ್, ಕೋಶಾದಿಕಾರಿ ಉಮ್ಮರ್ ತಾಜ್, ಮಾಜಿ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಸಿಟಿ, ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ಮೊಹಮ್ಮದ್ ಇಕ್ಬಾಲ್, ಅಬ್ದುಲ್ ಜಬ್ಬಾರ್, ಪ್ರಮುಖರಾದ ರಫೀಕ್ ಸೀಗಲ್, ನಾಝೀಂ ಸಾಹೇಬ್ ನೆಲ್ಯಾಡಿ, ಇಸ್ಮಾಯಿಲ್ ಮೊರಂಕಳ, ಮೊರಂಕಳ ನೂರುಲ್ ಹುದಾ ಮದರಸ ಸಮಿತಿ, ಉಸ್ತಾನುಲ್ ಹುಳುಂ ಮದರಸ ಪಟ್ಟೆ, ಶರಿಹತ್ ಕಾಲೇಜು ಸಮಿತಿ, ಯಂಗ್‌ಮೆನ್ಸ್ ಸಮಿತಿ ಪದಾಧಿಕಾರಿಗಳು, ಜಮಾಅತ್‌ರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಿದ್ದಿಕ್ ಮಣ್ಣಗುಂಡಿ ಸ್ವಾಗತಿಸಿದರು. ಸಿದ್ದೀಕ್ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು





