ಉಜಿರೆ- ಪೆರಿಯಶಾಂತಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರದಲ್ಲಿ ಆರಂಭ

ಶೇರ್ ಮಾಡಿ

4ಕಿ.ಮೀ. ಚತುಷ್ಪಥ ರಸ್ತೆ|| 24ಕಿ.ಮೀ ದ್ವಿಪಥ ರಸ್ತೆ ನಿರ್ಮಾಣ

ಕೊಕ್ಕಡ: ಸ್ಪರ್‌ ರಸ್ತೆಯಾಗಿ ಮೇಲ್ದರ್ಜೆಗೇರಿ ಇರುವ ಉಜಿರೆ – ಪೆರಿಯಶಾಂತಿ ನಡುವಿನ ದ್ವಿಪಥ ರಸ್ತೆಯ ನಿರ್ಮಾಣಕ್ಕೆ ವೇಗ ಸಿಕ್ಕಿದ್ದು. 315ಕೋ. ರೂ ವೆಚ್ಚದಲ್ಲಿ ಕೇಂದ್ರ ಸರಕಾರ ಅನುದಾನ ಮೀಸಲಿರಿಸಿದ್ದು. 24ಕಿ. ಮೀ ದ್ವಿಪಥ ಹಾಗೂ 4ಕಿ. ಮೀ. ಚತುಷ್ಪಥ ರಸ್ತೆ ನಿರ್ಮಾಣದ ಕಾಮಗಾರಿಯು ಶೀಘ್ರದಲ್ಲಿ ಆರಂಭವಾಗುವ ನಿರೀಕ್ಷೆಯಲ್ಲಿದೆ.

ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾ.ಹೆ.73ರ ಉಜಿರೆ-ಪೆರಿಯಶಾಂತಿ ರಸ್ತೆ ಅಗಲೀಕರಣ ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ ಮುಗಿಸಿದೆ. ಹೆದ್ದಾರಿ ಸಚಿವಾಲಯವು ಅಗಲೀಕರಣ ಹಾಗೂ ಒತ್ತುವರಿ ಸೇರಿ 613.65 ಕೋಟಿ ರೂಪಾಯಿ ಅನುದಾನವಿರಿಸಿದ್ದು, ಈ ಪೈಕಿ ರಸ್ತೆ ನಿರ್ಮಾಣಕ್ಕೆಂದೇ ಮುಗ್ರೋಡಿ ಸಂಸ್ಥೆ 315 ಕೋಟಿ ರೂಪಾಯಿಗೆ ಟೆಂಡರ್‌ ದಾಖಲಿಸಿ ಕಾಮಗಾರಿಯ ಜವಾಬ್ದಾರಿ ಹೊತ್ತಿದೆ.

ಯೋಜನೆಯ ರೂಪುರೇಷೆ:
ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ಹಾಗೂ ಮಂಗಳೂರು – ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರ ನಡುವೆ ಸಂಪರ್ಕ ಕಳಿಸುವ ರಸ್ತೆ ಇದಾಗಿದ್ದು ಉಜಿರೆ ಪೇಟೆಯಿಂದ ಎಸ್‌.ಡಿ.ಎಂ. ನ್ಯಾಚುರೋಪತಿ ಕಾಲೇಜಿನ ವರೆಗೆ ಹಾಗೂ ಜೋಡು ಸ್ಥಾನದಿಂದ ಧರ್ಮಸ್ಥಳ ಕಲ್ಲೇರಿಯವರೆಗೆ ವಿಭಾಜಕ ಸಹಿತ ಚತುಷ್ಪಥ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣವಾಗಿದೆ. ಮುಂದೆ ಉಜಿರೆಯ ಸಿದ್ಧವನದಿಂದ ನೇತ್ರಾವತಿ ವರೆಗೆ 4 ಕಿ.ಮೀ.ರಸ್ತೆ ಚತುಷ್ಪಥ ಮತ್ತು ಧರ್ಮಸ್ಥಳದಿಂದ ಪೆರಿಯ ಶಾಂತಿಯವರೆಗೆ 24 ಕಿಲೋ ಮೀಟರ್‌ ರಸ್ತೆ ದ್ವಿಪಥವನ್ನಾಗಿ ಅಭಿವೃದ್ಧಿ ಮಾಡಲಾಗುತ್ತದೆ. ರಸ್ತೆ ಎರಡೂ ಬದಿ ಎರಡು ಅಡಿ ಶೋಲ್ಡರ್‌ ಜೋಡಣೆಯಾಗಲಿದೆ. ಅಪಘಾತಗಳನ್ನು ತಪ್ಪಿಸಲು ಕಡಿದಾದ ತಿರುವುಗಳನ್ನು ನೇರಗೊಳಿಸಲಾಗುವುದು.

ಸೇತುವೆ ನಿರ್ಮಾಣ:
ಧರ್ಮಸ್ಥಳದ ನೇತ್ರಾವತಿ, ನಿಡ್ಲೆ ಹಾಗೂ ಪಾರ್ಪಿಕಲ್ಲು ನಲ್ಲಿ ಇರುವ ಸೇತುವೆಗಳು ಹಳೆಯದಾಗಿವೆ ಹಾಗಾಗಿ ಮೂರು ಕಡೆ ಹೊಸ ಸೇತುವೆಗಳು ನಿರ್ಮಾಣವಾಗಲಿದೆ. ಒಂದು ಚಿಕ್ಕ ಸೇತುವೆಯ ಕಾಮಗಾರಿಯೂ ಜೋಡಣೆಯಾಗಲಿದೆ. 37 ಸ್ಲಾಬ್‌ ಮೋರಿ, 12 ಬಾಕ್ಸ್‌ ಮೋರಿ, 28 ಪೈಪ್‌ ಮಾದರಿ ಮೋರಿಗಳು, ಪ್ರಮುಖ 3 ಜಂಕ್ಷನ್‌ಗಳು ಹಾಗೂ 63 ಸಣ್ಣ ಜಂಕ್ಷನ್‌ಗಳನ್ನಾಗಿಯೂ ಗುರುತಿಸಲಾಗಿದೆ.

ಅಂಡರ್‌ಪಾಸ್‌ ಗೆ ನೀಲ ನಕಾಶೆ:
ಶ್ರೀಕ್ಷೇತ್ರ ಧರ್ಮಸ್ಥಳದ ಮುಖ್ಯದ್ವಾರದ ಬಳಿ ಜನರ ಒತ್ತಡವನ್ನು ನಿವಾರಿಸಲು ಅಂಡರ್‌ಪಾಸ್‌ ನಿರ್ಮಾಣದ ಯೋಜನೆ ಇದೆ. ಅಂಡರ್‌ಪಾಸ್‌ ನಿರ್ಮಿಸಿ ಭಕ್ತರ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವ ನೀಲ ನಕಾಶೆ ಸಿದ್ಧವಾಗುತ್ತಿದೆ.

  •  

Leave a Reply

error: Content is protected !!