

ಉಪ್ಪಿನಂಗಡಿ ಸರಕರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಶಾಲಾ ಕಟ್ಟಡದ ಹಂಚಿನ ಛಾವಣಿಯು ರವಿವಾರ ಕುಸಿದು ಬಿದ್ದಿದೆ.

ಛಾವಣಿಯ ಪಕ್ಕಾಸು ಮತ್ತು ರೀಪು ದುರ್ಬಲವಾಗಿತ್ತಾದರೂ ಅಲ್ಲಿ ತರಗತಿ ನಡೆಯುತ್ತಿತ್ತು. ಆದಿತ್ಯವಾರವಾದ್ದರಿಂದ ವಿದ್ಯಾರ್ಥಿಗಳು ಇರದಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಸನಿಹದಲ್ಲೇ ಪದವಿಪೂರ್ವ ವಿಭಾಗದ ಕಟ್ಟಡ ಫೆ.25ಕ್ಕೆ ಉದ್ಘಾಟನೆಗೊಳ್ಳಲು ಸಿದ್ಧವಾಗಿರುವ ಸಮಯದಲ್ಲಿ ಈ ಹಳೆ ಕಟ್ಟಡದ ಚಾವಣಿ ಕುಸಿದಿದೆ.






