

ಬೆಳ್ತಂಗಡಿ: ಬಾಲಕನೋರ್ವ ಆಕಸ್ಮಿಕವಾಗಿ ಫಲ್ಗುಣಿ ನದಿಗೆ ಬಿದ್ದು ಮೃತಪಟ್ಟ ಘಟನೆ ಆರಂಬೋಡಿ ಗ್ರಾಮದಲ್ಲಿ ರವಿವಾರ ಸಂಜೆ ಸಂಭವಿಸಿದೆ.

ಉಪ್ಪಿನಂಗಡಿಯ ರಾಮಕುಂಜ ಸಮೀಪದ ಆತೂರು ವಸಂತ ಮತ್ತು ವಿಜಯ ದಂಪತಿಯ ಪುತ್ರ ಪವನ್(16) ಮೃತ ಬಾಲಕ.
ಈತ ಆರಂಬೋಡಿ ಗ್ರಾಮದಲ್ಲಿರುವ ಸೂರಂಟೆ ಮನೆಯ ಅಜ್ಜಿಯ ಮನೆಯಲ್ಲಿದ್ದು ಸಿದ್ದಕಟ್ಟೆ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಛಾವಣಿಯ ಪಕ್ಕಾಸು ಮತ್ತು ರೀಪು ದುರ್ಬಲವಾಗಿತ್ತಾದರೂ ಅಲ್ಲಿ ತರಗತಿ ನಡೆಯುತ್ತಿತ್ತು. ಆದಿತ್ಯವಾರವಾದ್ದರಿಂದ ವಿದ್ಯಾರ್ಥಿಗಳು ಇರದಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಸನಿಹದಲ್ಲೇ ಪದವಿಪೂರ್ವ ವಿಭಾಗದ ಕಟ್ಟಡ ಫೆ.25ಕ್ಕೆ ಉದ್ಘಾಟನೆಗೊಳ್ಳಲು ಸಿದ್ಧವಾಗಿರುವ ಸಮಯದಲ್ಲಿ ಈ ಹಳೆ ಕಟ್ಟಡದ ಚಾವಣಿ ಕುಸಿದಿದೆ.






