ಬಂದಾರು: ಪೆರ್ಲ -ಬೈಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳ

ಶೇರ್ ಮಾಡಿ

ಬಂದಾರು: ಸ. ಹಿ. ಪ್ರಾ. ಶಾಲೆ ಪೆರ್ಲ -ಬೈಪಾಡಿಯಲ್ಲಿ ಮೆಟ್ರಿಕ್ ಮೇಳ ಆಯೋಜಿಸಲಾಗಿತ್ತು.

ಸಂತೆ ಮೇಳದ ಉದ್ಘಾಟನೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ದಾಮೋದರ.ಕೆ ಅವರು ನೆರವೇರಿಸಿದರು. ನಾಲ್ಕರಿಂದ ಏಳನೇ ತರಗತಿ ವಿದ್ಯಾರ್ಥಿಗಳು ವ್ಯಾಪಾರ ಮಾಡಿದರು. ತರಕಾರಿ, ಹಣ್ಣು, ಫ್ಯಾನ್ಸಿ ಸ್ಟೋರ್, ಹೋಟೆಲ್, ಬೇಕರಿ ಪದಾರ್ಥಗಳು, ಆಟದ ಸ್ಟಾಲ್ ಗಳು ಇದ್ದವು.

ಕಾರ್ಯಕ್ರಮದಲ್ಲಿ ಬಂದಾರು ಗ್ರಾ.ಪಂ. ಸದಸ್ಯರಾದ ಅನಿತಾ.ಕೆ ಅವರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಮುಖ್ಯೋಪಾಧ್ಯಾಯರಾದ ನಳಿನಿ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

  •  

Leave a Reply

error: Content is protected !!