

ಧರ್ಮಸ್ಥಳ: ಬೆಂಗಳೂರಿನ ಉದ್ಯಮಿಯಾದ ಕೆ.ಎಸ್. ದಿನೇಶ್ ಮತ್ತು ಪತ್ನಿ ಪಿ.ಸುನೀತಾ ಧರ್ಮಸ್ಥಳದ ಭಕ್ತರಾಗಿದ್ದು, ದೇವಸ್ಥಾನಕ್ಕೆ ಕಾಣಿಕೆಯಾಗಿ ಅರ್ಪಿಸಿದ ಬೃಹತ್ ಘಂಟೆಯನ್ನು ಬುಧವಾರ ಶಿವರಾತ್ರಿಯ ಶುಭಾವಸರದಲ್ಲಿ ಧರ್ಮಸ್ಥಳದಲ್ಲಿ ಅಣ್ಣಪ್ಪಸ್ವಾಮಿ ಬೆಟ್ಟದ ಎದುರು ನಿರ್ಮಿಸಿದ ನೂತನ ಮಂಟಪದಲ್ಲಿ ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.

ಪೂಜ್ಯ ಶ್ರೀ ಹೆಗ್ಗಡೆಯವರು ದಾನಿಗಳನ್ನು ಗೌರವಿಸಿದರು.






