ನೆಲ್ಯಾಡಿ ಜೇಸಿಐನಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರ

ಶೇರ್ ಮಾಡಿ

ನೆಲ್ಯಾಡಿ: ಜೆಸಿಐ ನೆಲ್ಯಾಡಿ ಘಟಕದ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರವನ್ನು ಮಾದೇರಿ ನಿವಾಸಿ ಗಂಗಪ್ಪ ಗೌಡ ಅವರಿಗೆ ನೀಡಿ ಗೌರವಿಸಲಾಯಿತು.

ಭಯ ಮುಕ್ತ ಸದೃಢ ಸಮಾಜದ ನಿರ್ವಹಣೆಗಾಗಿ ಪ್ರತಿದಿನ ತಮ್ಮ ನಿದ್ರೆ ಹಾಗೂ ಪ್ರಾಣದ ಹಂಗನ್ನು ತೊರೆದು ಅವರು ಕಳೆದ 50 ವರ್ಷಗಳಿಂದ ವಿವಿಧ ಸಂಸ್ಥೆ ಹಾಗೂ ಬ್ಯಾಂಕುಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಪ್ರಸ್ತುತ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಅವರ ಶ್ರಮವನ್ನು ಗುರುತಿಸಿ ಈ ಪುರಸ್ಕಾರ ನೀಡಿ ಗೌರವಿಸಲಾಯಿತು.

ಘಟಕಾಧ್ಯಕ್ಷ ಜೇಸಿ ಸುಧಾಕರ್ ಶೆಟ್ಟಿ, ಮಹಿಳಾ ಜೇಸಿ ಅಧ್ಯಕ್ಷೆ ಜೇಸಿ ಪ್ರವೀಣಿ ಸುಧಾಕರ್ ಶೆಟ್ಟಿ, ಜೊತೆ ಕಾರ್ಯಧರ್ಶಿ ಜೇಸಿ ಲೀಲಾಮೋಹನ್, ಜೇಸಿ ಶ್ರೇಯಸ್ ಶೆಟ್ಟಿ, ಜೇಸಿ ಹರೀಶ್ ರೈ ಅಮುಂಜಾ ಉಪಸ್ಥಿತರಿದ್ದರು.

  •  

Leave a Reply

error: Content is protected !!