ನೆಲ್ಯಾಡಿ:ವಿಭೂತಿ ಆಚರಣೆ ಯೊಂದಿಗೆ ಸೀರೋ ಮಲಬಾರ್ ಕ್ರೈಸ್ತರು ವ್ರತಾಚರಣೆ ಕಾಲಕ್ಕೆ ಪ್ರವೇಶ

ಶೇರ್ ಮಾಡಿ

ನೆಲ್ಯಾಡಿ: ಶಾಂತಿ ಸಹಬಾಳ್ವೆ, ಪ್ರೀತಿ ಹಾಗೂ ಕ್ಷಮೆಯ ಹೊಸ ಪ್ರಪಂಚ ಧರ್ಶನಕ್ಕೆ ಮುನ್ನುಡಿ ಬರೆದ ಪ್ರಭು ಯೇಸುಕ್ರಿಸ್ತರ ಯಾತನೆ ಮರಣ ಮತ್ತು ಪುನಃರುತ್ತಾನ ನೆನಪಿಸುವ ವೃತಾಚರಣೆಯ ಕಾಲಕ್ಕೆ ಸೀರೋ ಮಲಬಾರ್ ಕ್ರೈಸ್ತರು ಪಾಪ ಪರಿಹಾರದ ಸಂಕೇತವಾಗಿ ಹಣೆಗೆ ವಿಭೂತಿ ಹಚ್ಚಿ ಪ್ರವೇಶಿಸಿದರು.

ಇಂದಿನಿಂದ ಐವತ್ತು ದಿನಗಳವರೆಗೆ ಸಾತ್ವಿಕ ಆಹಾರ ಪದ್ಧತಿಯೊಂದಿಗೆ ಮಾಂಸ ಆಹಾರ ಪದ್ಧತಿಯನ್ನು ತ್ಯಜಿಸಿ ಸಸ್ಯಾಹಾರಿಗಳಾಗಿ, ಇನ್ನು ಕೆಲವರು ಉಪವಾಸ ಮತ್ತು ಪ್ರಾರ್ಥನೆಯೊಂದಿಗೆ ಆದ್ಯಾತ್ಮ ವಿಚಾರಗಳಿಗೆ ಹೆಚ್ಚು ಶ್ರದ್ದೆ ನೀಡಲಿದ್ದಾರೆ.

ಆದಿತ್ಯವಾರ ಮತ್ತು ಶುಕ್ರವಾರಗಳಲ್ಲಿ ಶಿಲುಬೆಯ ಹಾದಿ ವ್ರತಾಚಾರಣೆ ಕಾಲದ ವಿಶೇಷ ಆಕರ್ಷಣೆ. ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ವಂದನಿಯ ಫಾ.ಶಾಜಿ ಮಾತ್ಯು ಹಾಗೂ ಫಾ.ಅರುಣ್ ಆರಳದಲ್ಲಿ, ಫಾ.ಅಲೆಕ್ಸ್ ಧಾರ್ಮಿಕ ವಿಧಿಗಳಿಗೆ ನೇತೃತ್ವ ನೀಡಿದರು.

  •  

Leave a Reply

error: Content is protected !!