

ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮದ ಬಳಕ್ಕ ಎಂಬಲ್ಲಿ ಕೃಷಿ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆ ತೆಂಗು, ಬಾಳೆಗಿಡ ನಾಶಗೊಳಿಸಿರುವ ಘಟನೆ ಮಾ.2ರ ರಾತ್ರಿ ನಡೆದಿದೆ.

ಬಳಕ್ಕ ನಿವಾಸಿ ಬಾಲಕೃಷ್ಣ ಎಂಬವರ ತೋಟದಲ್ಲಿದ್ದ ಸುಮಾರು 20ಕ್ಕೂ ಹೆಚ್ಚು ತೆಂಗಿನ ಗಿಡ ಹಾಗೂ ಬಾಳೆಗಿಡಗಳನ್ನು ಕಾಡಾನೆ ಹಾನಿಗೊಳಿಸಿದೆ. ನಾಲ್ಕೈದು ದಿನಗಳಿಂದ ಈ ಪರಿಸರದ ಅನಿಲ, ಕುದ್ಕೋಳಿ ಭಾಗದಲ್ಲಿ ಗ್ರಾಮಸ್ಥರಿಗೆ ಕಾಡಾನೆ ಗೋಚರಿಸುತ್ತಿದ್ದು ಗ್ರಾಮಸ್ಥರು ಆತಂಕಿತರಾಗಿದ್ದಾರೆ.






