ಅರಸಿನಮಕ್ಕಿಯಲ್ಲಿ ಸಬ್ ಸ್ಟೇಷನ್ ಸ್ಥಾಪನೆ ಯಾವಾಗ? ಜನಪ್ರತಿನಿಧಿಗಳ ಹಾಗೂ ಗ್ರಾಮಸ್ಥರ ಬೇಡಿಕೆಗೆ ಕಿಮ್ಮತ್ತಿಲ್ಲವೇ

ಶೇರ್ ಮಾಡಿ

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯಲ್ಲಿ ಹೊಸದಾಗಿ 33/11 ಕೆ.ವಿ.ಸಬ್ ಸ್ಟೇಷನ್ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹಲವು ವರ್ಷಗಳಿಂದ ಪತ್ರ ವ್ಯವಹಾರ ಹಾಗೂ ಕಚೇರಿ ಅಲೆಯುವುದೇ ನಡೆಯುತ್ತಿದೆ ಆದರೆ ಅಧಿಕಾರಿ ವರ್ಗದವರಿಂದ ಯಾವುದೇ ಸಕಾರಾತ್ಮಕದೊರೆಯದೆ ಇರುವುದು ಸಾರ್ವಜನಿಕರಲ್ಲಿ ಯಕ್ಷಪ್ರಶ್ನೆಯಾಗಿದೆ.

ಕೊಕ್ಕಡ, ಕಳೆಂಜ, ಶಿಶಿಲ, ಶಿಬಾಜೆ ಗ್ರಾಮಗಳಿಗೆ ಅರಸಿನಮಕ್ಕಿ ಕೇಂದ್ರ ಸ್ಥಾನದಲ್ಲಿದ್ದು 33/11 ಕೆ.ವಿ.ಸಬ್ ಸ್ಟೇಷನ್ ಸ್ಥಾಪನೆಗೊಂಡಲ್ಲಿ ಈ ಭಾಗದ ಬಹುತೇಕ ವಿದ್ಯುತ್ ಸಮಸ್ಯೆಗಳು ಪರಿಹಾರ ಸಿಗಬಹುದು ಎಂಬ ಉದ್ದೇಶದಿಂದ ಹಲವು ವರ್ಷಗಳ ಹಿಂದೆಯೇ ಪ್ರಯತ್ನ ಆರಂಭಿಸಲಾಗಿತ್ತು. ಕಾನೂನು ಎದುರಾದ ಕಾರಣ ಯೋಜನೆ ನನೆಗುಂದಿಗೆ ಬಿದ್ದಿತ್ತು. ಇಲಾಖೆಗಳ ಸಮನ್ವಯತೆ ಹಾಗೂ ಇಚ್ಛಾಸಕ್ತಿಯ ಕೊರತೆಯಿಂದಾಗಿ ಮುಂದೂಡಲ್ಪಡುತ್ತಿದೆ. ಆದರೆ ಗ್ರಾಮ ಪಂಚಾಯಿತಿ ಹಾಗೂ ಸಾರ್ವಜನಿಕರು ಈ ಬಗ್ಗೆ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ.

ಕೃಷಿಕರಿಗೆ ಅನುಕೂಲ:
ಈ ಪ್ರದೇಶದಲ್ಲಿ ಅತಿ ಹೆಚ್ಚು ಕೃಷಿಕರೇ ಇದ್ದು ಕೃಷಿಕರಿಗೆ ಕೃಷಿ ಬಳಕೆಗೆ ತೊಂದರೆಯಾಗಿದ್ದು ಪಂಪ್ ಸೆಟ್ ಚಾಲನೆ ಮಾಡಲು ಸಾಧ್ಯವಾಗದೆ ಕೃಷಿ ತೋಟಕ್ಕೆ ತೊಂದರೆಯಾಗುತ್ತಿದೆ. ಪ್ರತಿ ಗ್ರಾಮ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುತ್ತಿದೆ.

ಪಾಲಸ್ತಡ್ಕದಲ್ಲಿ ಜಾಗ ಗುರುತು:
ಅರಸಿನಮಕ್ಕಿಯಲ್ಲಿ 33/11 ಕೆ. ವಿ. ಸಬ್ ಸ್ಟೇಷನ್ ಸ್ಥಾಪಿಸಲು ಹಲವು ವರ್ಷಗಳ ಹಿಂದೆಯೇ ಪಾಲಸ್ತಡ್ಕದಲ್ಲಿ ಜಾಗ ಗುರುತು ಮಾಡಲಾಗಿದೆ. ಪಾಲಸ್ತಡ್ಕ ಎಂಬಲ್ಲಿ 7ಎಕರೆ ಸರಕಾರಿ ಜಾಗವಿದ್ದು ಅದರಲ್ಲಿ 2ಎಕರೆಯಷ್ಟು ಈ ಪ್ರದೇಶದಲ್ಲಿ 33/11 ಕೆ. ವಿ. ಸಬ್ ಸ್ಟೇಷನ್ ಸ್ಥಾಪಿಸಲು ಹಲವು ವರ್ಷಗಳ ಹಿಂದೆಯೇ ಜಾಗ ಗುರುತು ಮಾಡಲಾಗಿದೆ. ಈ ಪ್ರದೇಶದಲ್ಲಿ ಇದ್ದ ಮರವನ್ನು ತೆರವುಗೊಳಿಸಲು ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಕೇಳಲಾಗಿದ್ದು. ಆದರೆ ಇದುವರೆಗೂ ಅರಣ್ಯ ಇಲಾಖೆಯಿಂದ ಸಮರ್ಪಕವಾದ ಉತ್ತರ ಇನ್ನೂ ಸಿಕ್ಕಿಲ್ಲ. ಇದರಿಂದಾಗಿ ಸಬ್ ಸ್ಟೇಷನ್ ಗೆ ಗುರುತಿಸಲಾದ ಜಾಗದ ತಕರಾರು ಮುಗಿಯದ ಕಾರಣ ಯಾವುದೇ ಪ್ರಕ್ರಿಯೆ ಮುಂದುವರೆಯುತ್ತಿಲ್ಲ.

ಅರಸಿನಮಕ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇದ್ದ ಸುಮಾರು 11 ಎಕ್ರೆ ಅಷ್ಟು ಜಾಗವನ್ನು ಅರಣ್ಯ ಇಲಾಖೆಗೆ ಬೆಳ್ತಂಗಡಿ ತಹಶೀಲ್ದಾರರು ಹಸ್ತಾಂತರಿಸುವ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಮರಗಳ ಸಂಖ್ಯೆ ಕಡಿಮೆ ಇರುವುದರಿಂದ. ಈ ಪೈಕಿ 2 ಎಕರೆ ಜಾಗವನ್ನು ವಿದ್ಯುತ್ ಸಬ್ ಸ್ಟೇಷನ್ ನಿರ್ಮಿಸಲು ಮೀಸಲಿಡುವಂತೆ ಪಂಚಾಯಿತಿ ವತಿಯಿಂದ ವಿನಂತಿಸಲಾಗಿತ್ತು ಅದನ್ನು ಪರಿಗಣಿಸದೆ ಅವರಿಗೆ ನೀಡಲಾಗಿದೆ. ಬೆಳ್ತಂಗಡಿ ತಹಸೀಲ್ದಾರರು ಮನಸ್ಸು ಮಾಡಿದರೆ ಮಾತ್ರ ಸಹಕಾರಗೊಳ್ಳಲು ಸಾಧ್ಯ
-ಸುಧೀರ್ ಕುಮಾರ್ ಉಪಾಧ್ಯಕ್ಷರು ಗ್ರಾ.ಪಂ.ಅರಸಿನಮಕ್ಕಿ

ಜಾಗವನ್ನು ನೀಡಿದಲ್ಲಿ ಸಬ್ ಸ್ಟೇಷನ್ ಅನ್ನು ಸ್ಥಾಪಿಸಲು ಸಿದ್ದರಿದ್ದೇವೆ ಹಾಗೂ ಭೂಮಿಗೆ ನಿಗದಿಪಡಿಸಿದ ಮೊತ್ತವನ್ನು ನೀಡಲು ನಾವು ತಯಾರಿದ್ದೇವೆ. ಆದಷ್ಟು ಬೇಗ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣೆ ನೀಡಿದಲ್ಲಿ ಜನರ ಬೇಡಿಕೆಯಂತೆ ಮುಂದಿನ ತುರ್ತು ಕೆಲಸ ಮಾಡಲು ಸಾಧ್ಯವಾಗುತ್ತದೆ
-ಪ್ರವೀಣ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೆಸ್ಕಾಂ ಇಲಾಖೆ ಉಜಿರೆ

ಬಳಕ್ಕ ನಿವಾಸಿ ಬಾಲಕೃಷ್ಣ ಎಂಬವರ ತೋಟದಲ್ಲಿದ್ದ ಸುಮಾರು 20ಕ್ಕೂ ಹೆಚ್ಚು ತೆಂಗಿನ ಗಿಡ ಹಾಗೂ ಬಾಳೆಗಿಡಗಳನ್ನು ಕಾಡಾನೆ ಹಾನಿಗೊಳಿಸಿದೆ. ನಾಲ್ಕೈದು ದಿನಗಳಿಂದ ಈ ಪರಿಸರದ ಅನಿಲ, ಕುದ್ಕೋಳಿ ಭಾಗದಲ್ಲಿ ಗ್ರಾಮಸ್ಥರಿಗೆ ಕಾಡಾನೆ ಗೋಚರಿಸುತ್ತಿದ್ದು ಗ್ರಾಮಸ್ಥರು ಆತಂಕಿತರಾಗಿದ್ದಾರೆ.

  •  

Leave a Reply

error: Content is protected !!