ಉದನೆ ಬಿಷಪ್ ಪೋಳಿಕಾರ್ಪೋಸ್ ಕಿಂಡರ್ ಗಾರ್ಡನ್ ಯು.ಕೆ.ಜಿ ಪದವಿ ಪ್ರಧಾನ ಸಮಾರಂಭ

ಶೇರ್ ಮಾಡಿ

ನೆಲ್ಯಾಡಿ: ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ಬಿಷಪ್ ಪೋಳಿಕಾರ್ಪೋಸ್ ಕಿಂಡರ್ ಗಾರ್ಡನ್ ನಲ್ಲಿ ಯು.ಕೆ.ಜಿ ಪುಟಾಣಿಗಳ ಪದವಿ ಪ್ರಧಾನ ಸಮಾರಂಭ ಶುಕ್ರವಾರದಂದು ವಿಜೃಂಭಣೆಯಿಂದ ನಡೆಯಿತು. ಪುಟಾಣಿಗಳು ತಮ್ಮ ಶಿಕ್ಷಣದ ಪ್ರಾಥಮಿಕ ಹಂತವನ್ನು ಪೂರೈಸಿ ಹೊಸ ಶಿಕ್ಷಣ ಪ್ರವಾಸಕ್ಕೆ ಕಾಲಿಡುವ ಈ ಕ್ಷಣವು ಎಲ್ಲರಿಗೂ ಸಂತಸದಾಯಕವಾಗಿತ್ತು.

ಮುಖ್ಯ ಅತಿಥಿಯಾಗಿ ಹೃದಯಾರಮ್ ಮೈಂಡ್ ಕೇರ್ ಮತ್ತು ಕೌನ್ಸಲಿಂಗ್ ಸೆಂಟರ್‌ನ ಕೌನ್ಸಿಲರ್ ಹಾಗೂ ಪಿಸಿಯೋಥೆರಪಿಸ್ಟ್ ಸಿಸ್ಟರ್ ಆಲ್ಫೀ ಜೋಸೆಫ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳ ಬದುಕಿನಲ್ಲಿ ಕುಟುಂಬದ ಮಹತ್ವವನ್ನು ವಿವರಿಸಿದರು. ಅವರು, “ಕುಟುಂಬವೇ ಮಕ್ಕಳ ಪ್ರಥಮ ಶಾಲೆ. ಪೋಷಕರು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಇದು ಮಕ್ಕಳ ಮನೋವಿಕಾಸ ಹಾಗೂ ನೈತಿಕ ಬೆಳೆಸುವಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೆತ್ತವರ ಪ್ರೀತಿಯಲ್ಲಿ ಬೆಳೆದ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ದೊರೆತರೆ, ಅವರು ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ಮಗು ಹಲವರಿಂದ ಹಲವನ್ನು ಕಲಿಯುತ್ತದೆ. ಮನೆ, ಶಾಲೆ, ಮತ್ತು ಗೆಳೆಯರ ಪ್ರಭಾವದಿಂದಲೇ ಅವರ ವ್ಯಕ್ತಿತ್ವ ಅಭಿವೃದ್ಧಿಯಾಗುತ್ತದೆ. ಸದ್ಭಾವನೆಗಳಿಗೇ ಹೆಚ್ಚು ಮಹತ್ವ ಕೊಡುವಂತಹ ಸೌಹಾರ್ದಯುತ ವಾತಾವರಣ ಒದಗಿಸಬೇಕಾಗಿದೆ” ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರಾದ ರೆ. ಫಾ. ಹನಿ ಜೇಕಬ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. “ಮಕ್ಕಳು ತಪ್ಪು ಮಾಡುವುದು ಸಹಜ. ಆದರೆ, ಆ ತಪ್ಪನ್ನು ತಿದ್ದಿ ಸರಿದಾರಿಗೆ ತರುವ ಹೊಣೆ ಶಿಕ್ಷಕರದು. ಶಿಲೆ ಒಂದು ಸುಂದರ ಶಿಲ್ಪವಾಗಬೇಕಾದರೆ,   ಶಿಲೆ ಒಂದು ಸುಂದರ ಶಿಲ್ಪವಾಗಬೇಕಾದರೆ, ಶಿಲ್ಪಿಯ ಉಳಿ ಪೆಟ್ಟು ತಿಂದರಷ್ಟೇ ಸಾಧ್ಯವಾಗಿದೆ ಹಾಗೆ ಮಕ್ಕಳ ಭವಿಷ್ಯ ಕಟ್ಟುವುದು ಶಿಕ್ಷಕರ ನೇತೃತ್ವದಲ್ಲಿ ಸಾಧ್ಯ” ಎಂದು ಹೇಳಿದರು.

ಸಂಸ್ಥೆಯ ಆಡಳಿತಾಧಿಕಾರಿ ಜಾನ್ ಕೆ.ಕೆ, ಸೈಂಟ್ ಆಂಟನೀಸ್ ಪ್ರೌಢ ಶಾಲಾ ಮುಖ್ಯಶಿಕ್ಷಕ ಶ್ರೀಧರ ಗೌಡ ಪುಟಾಣಿಗಳಿಗೆ ಶುಭಾಶಯ ತಿಳಿಸಿದರು. ಪೋಷಕರಿಗೆ ಮಕ್ಕಳ ಒಳ್ಳೆಯ ಬೆಳವಣಿಗೆಯ ಕುರಿತು ಉಪಯುಕ್ತ ಸಲಹೆಗಳನ್ನು ನೀಡಿದರು.

ವೇದಿಕೆಯಲ್ಲಿ ಸಿಸ್ಟರ್ ಬ್ಲೆಸ್ಸಿ, ಬಿಷಪ್ ಆಂಗ್ಲಮಾಧ್ಯಮ ಮುಖ್ಯಶಿಕ್ಷಕ ಯಶೋಧರ, ಕೆ.ಜಿ ವಿಭಾಗದ ಮುಖ್ಯಸ್ಥೆ ಶ್ರೀಮತಿ ವಿನೀತಾ ತಂಗಚ್ಛನ್ ಉಪಸ್ಥಿತರಿದ್ದು ಪುಟಾಣಿಗಳಿಗೆ ಶುಭಾಶಯ ಕೋರಿದರು.

ಮುಖ್ಯ ಹಂತವಾಗಿ ಯು.ಕೆ.ಜಿ ಪುಟಾಣಿಗಳಿಗೆ ಅಧಿಕೃತವಾಗಿ ಪದವಿ ಪ್ರಮಾಣಪತ್ರ ವಿತರಿಸಲಾಯಿತು. ಪುಟಾಣಿಗಳು ಹೊಸ ಹಂತದತ್ತ ಹೆಜ್ಜೆ ಇಡಲು ಉತ್ಸಾಹಭರಿತರಾಗಿದ್ದು, ಪೋಷಕರು ತಮ್ಮ ಮಕ್ಕಳ ಸಾಧನೆ ನೋಡಿ ಹೆಮ್ಮೆಪಟ್ಟರು.

ಕಾರ್ಯಕ್ರಮದಲ್ಲಿ ಶಿಕ್ಷಕಿ ಪ್ರಜ್ವಿತಾ ಸ್ವಾಗತಿಸಿದರು, ಶಿಕ್ಷಕಿ ರಮ್ಯಾ ವಂದಿಸಿದರು, ಹಾಗೂ ಶಿಕ್ಷಕಿ ದಿವ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು. ಪೋಷಕರು, ಸಂಸ್ಥೆಯ ಸಿಬ್ಬಂದಿ ವರ್ಗ, ಮತ್ತು ವಿದ್ಯಾರ್ಥಿಗಳು ಈ ವಿಶೇಷ ಸಂದರ್ಭಕ್ಕೆ ಸಾಕ್ಷಿಯಾಗಿದ್ದರು.

ಈ ಸಮಾರಂಭವು ಪುಟಾಣಿಗಳಿಗೆ ಭವಿಷ್ಯದ ಶಿಕ್ಷಣಯಾತ್ರೆಗಾಗಿ ಪ್ರೇರಣೆಯ ಆಗರವಾಗಿ, ಪೋಷಕರಿಗಂತೂ ಅವರ ಮಕ್ಕಳ ಬೆಳವಣಿಗೆಯಲ್ಲಿ ಇನ್ನಷ್ಟು ಜಾಗರೂಕತೆಯಿಂದ ಕೈಜೋಡಿಸುವ ವೇದಿಕೆಯಾಗಿತು.

  •  

Leave a Reply

error: Content is protected !!