


ಕೊಕ್ಕಡ: ಅಖಿಲ ಕರ್ನಾಟಕ ರಾಣೆಯರ್ ಸಮಾಜ ಸೇವಾ ಸಂಘ(ರಿ.), ಮಂಗಳೂರು ಹಾಗೂ ರಾಣೆಯರ್ ಸಮಾಜ ಸೇವಾ ಸಂಘ, ತುಂಬೆತಡ್ಕ ಇವರ ಜಂಟಿ ಆಶ್ರಯದಲ್ಲಿ ತುಂಬೆತಡ್ಕದ ಅಂಗನವಾಡಿ ವಠಾರದಲ್ಲಿ ಐದು ಜಿಲ್ಲೆಗಳ ರಾಣೆಯರ್ ಸಮಾಜದ ಸಮಾಲೋಚನಾ ಸಭೆ ಆಯೋಜಿಸಲಾಯಿತು.

ಸಭೆಯನ್ನು ಹಾಸನ ಜಿಲ್ಲಾ ಅಧ್ಯಕ್ಷ ಮೋನಪ್ಪ ಹೆಗ್ಗದೆ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗಿದ್ದು, ಸಮಾಜದ ಸಂಘಟನೆ ಹಾಗೂ ಬಲವರ್ಧನೆಯ ಪ್ರಮುಖ ಅಂಶಗಳ ಕುರಿತು ಚರ್ಚಿಸಿ. ಮುಂದಿನ ದಿನಗಳಲ್ಲಿ ಪ್ರತಿ ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಸಂಘದ ಬಲವರ್ಧನೆಗಾಗಿ ಹೆಚ್ಚಿನ ಪ್ರಯತ್ನಗಳನ್ನು ನಡೆಸಬೇಕೆಂದು ಅವರು ಯುವ ಪೀಳಿಗೆಗೆ ಕರೆ ನೀಡಿದರು.
ಮುಖ್ಯಅತಿಥಿಗಳಾಗಿ ರಾಣೆಯರ್ ಸಮಾಜ ಸೇವಾ ಸಂಘದ ಸಂಸ್ಥಾಪಕಾಧ್ಯಕ್ಷ ಸೂರಪ್ಪ ರಾಣೆಯರ್, ಪ್ರಧಾನ ಕಾರ್ಯದರ್ಶಿ ಶಶಿಕಾಂತ್ ಬೈಲೂರ್, ಕೋಶಾಧಿಕಾರಿ ಶಿವಣ್ಣ, ಕೃಷ್ಣಪ್ಪ ನೆಲ್ಯಾಡಿ, ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಬೈಲೂರು ಹಾಗೂ ನೂತನ ವಲಯ ಸಮಿತಿಯ ಅಧ್ಯಕ್ಷ ಮಹಾಬಲ ರಾಣೆಯರ್ ಉಪಸ್ಥಿತರಿದ್ದರು.
ಸಭೆಯಲ್ಲಿ ಐದು ಜಿಲ್ಲೆಗಳ ಪ್ರಮುಖ ಮುಖಂಡರು, ಸದಸ್ಯರುಗಳು ಭಾಗವಹಿಸಿ, ಸಂಘದ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸಿದರು.





