ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಮೋಡಾ ವೀಲ್ ಚೇರ್ ವಿತರಣೆ

ಶೇರ್ ಮಾಡಿ

ಬೆಳಾಲು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಬೆಳ್ತಂಗಡಿ ತಾಲೂಕಿನ, ಉಜಿರೆ ವಲಯದ, ಬೆಳಾಲು ಕಾರ್ಯಕ್ಷೇತ್ರದ ಕುಕ್ಕೊಟ್ಟು ನಿವಾಸಿ ಮುತ್ತಪ್ಪ ನಾಯ್ಕ್ ರವರಿಗೆ ನಡೆದಾಡಲು ಕಷ್ಟಸಾಧ್ಯವಾಗಿದ್ದು ಇವರಿಗೆ ಸಮುದಾಯ ಅಭಿವೃದ್ಧಿ ವಿಭಾಗದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಕಮೋಡ ವೀಲ್ ಚೇರ್ ಗೆ ಬೇಡಿಕೆ ನೀಡಿದ್ದು, ಸದ್ರಿ ಬೇಡಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೂಜ್ಯ ಖಾವಂದರು ಮಂಜೂರು ಮಾಡಿರುತ್ತಾರೆ. ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ರವರು ವೀಲ್ ಚೇರ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಉಜಿರೆ ವಲಯದ ಮೇಲ್ವಿಚಾರಕಿ ವನಿತಾ, ಸೇವಾಪ್ರತಿನಿದಿ ಪ್ರಮೀಳಾ, ಸೇವಾಪ್ರತಿನಿದಿ ತಾರನಾಥ, ಬೆಳಾಲು ಒಕ್ಕೂಟದ ಉಪಾಧ್ಯಕ್ಷರು ಪ್ರಸಾದ್, ಬೆಳಾಲು ಹಾಲಿನ ಸೊಸೈಟಿ ಕಾರ್ಯದರ್ಶಿ ಸುಕೇಶ್ ಗೌಡ, ಮುತ್ತಪ್ಪ ನಾಯ್ಕ್ ರವರ ಮಗ ಜಯ, ಪೆರ್ಲ ಬೈಪಾಡಿ ಒಕ್ಕೂಟದ ಪದಾಧಿಕಾರಿಗಳಾದ ದಿನೇಶ್ ಅಡ್ಡಾರು, ಶೀನಪ್ಪ ಫಲಸದಕೋಡಿ ಉಪಸ್ಥಿರಿದ್ದರು

  •  

Leave a Reply

error: Content is protected !!