


ನೆಲ್ಯಾಡಿ: ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಸಂತ ಜೋಸೆಫ್ ದಿನಾಚರಣೆ ಮತ್ತು ಹಿರಿಯ ನಾಗರಿಕರ ಸಮ್ಮಿಲನ ವಿಜೃಂಭಣೆಯಿಂದ ನಡೆಯಿತು. ಈ ವಿಶೇಷ ಸಮಾರಂಭದಲ್ಲಿ ನೆಲ್ಯಾಡಿ ಸಂತ ಅಲ್ಫೋನ್ಸ ಮತ್ತು ಆರ್ಲ ಸೆಂಟ್ ಮೇರಿಸ್ ಚರ್ಚ್‌ನ ಸದಸ್ಯರು ಸೇರಿ 70ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.

ಮಾತೃ ವೇದಿಕೆ, ವಿನ್ಸೆಂಟ್ ಡಿ ಪೌಲ್ ಸೊಸೈಟಿ, ಎಸ್.ಎಂ.ವೈ.ಎಂ. ಯುವ ಜನತೆ ಮತ್ತು ಚರ್ಚ್‌ನ ಟ್ರಸ್ಟಿಗಳು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದರು. ಪ್ರಾರ್ಥನೆ, ಧಾರ್ಮಿಕ ಕಾರ್ಯಕ್ರಮಗಳು, ಸಂತ ಜೋಸೆಫ್ ಜೀವನದ ಮಹತ್ವದ ಕುರಿತ ಪ್ರವಚನ, ಹಾಗೂ ಹಿರಿಯ ನಾಗರಿಕರಿಗೆ ಗೌರವ ಸೂಚಿಸುವ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲರು ಸ್ನೇಹ ಔತಣ ಸೇವಿಸಿ ಪರಸ್ಪರ ಅನುಭವ ಹಂಚಿಕೊಂಡರು. ಈ ವಯಸ್ಕರ ಸಮಾವೇಶವು ಹಿರಿಯ ನಾಗರಿಕರ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿ, ಅವರ ಕಲ್ಯಾಣಕ್ಕೆ ಸಮಾಜ ಒಗ್ಗೂಡಬೇಕೆಂಬ ಸಂದೇಶವನ್ನು ಸಾರಿತು.ಚರ್ಚ್‌ನ ಧರ್ಮಗುರು ವಂದನೀಯ ಶಾಜಿ ಮಾತ್ಯು, ಭವಿಷ್ಯದಲ್ಲಿಯೂ ಇಂತಹ ಸಾಮಾಜಿಕ ಕಾರ್ಯಕ್ರಮಗಳು ನಿರಂತರವಾಗಲಿ ಎಂದು ಶುಭ ಹಾರೈಸಿದರು.




