


ಕೊಕ್ಕಡ: ಕೊಕ್ಕಡ ಸರಕಾರಿ ಪದವಿ ಪೂರ್ವ ಕಾಲೇಜುನ ಪ್ರೌಢಶಾಲಾ ವಿಭಾಗದಲ್ಲಿ ಮಾ.18ರಂದು ಕರ್ನಾಟಕ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ರಂಗೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳು ಬಲೂನ್ ಹಾರಿಸುವ ಮೂಲಕ ಸಾಂಸ್ಕೃತಿಕ ಮಹೋತ್ಸವಕ್ಕೆ ಚಾಲನೆ ನೀಡಿದರು.

ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಕ್ರಾಫ್ಟ್, ನೃತ್ಯ, ಮೇಕ್ಅಪ್ ಆರ್ಟ್ ಮತ್ತು ನೃತ್ಯ ಉಡುಪುಗಳ ಬಗ್ಗೆ ತರಬೇತಿ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಶಾಲಾ ಮುಖ್ಯಶಿಕ್ಷಕಿ ರೀನಾ.ಎಸ್ ವಹಿಸಿ, ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನೃತ್ಯಗಳ ಸಂರಕ್ಷಣೆ ನಮ್ಮ ಹೊಣೆ ಎಂದು ಉದ್ಘೋಷಿಸಿದರು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದು ಗಮನಿಸಿ, ಇಂತಹ ಸಾಂಸ್ಕೃತಿಕ ಚಟುವಟಿಕೆಗಳು ಅವರ ದಾರಿ ಸರಿಯಾಗಿಸಲು ಸಹಾಯಕರಾಗಬಹುದು ಎಂಬ ಹಿತವಚನ ನೀಡಿದರು.
ನೃತ್ಯ ತರಬೇತುದಾರರಾದ ಕುಮಾರಿ ಪೂಜಾ ಕಾರ್ಯಕ್ರಮದಲ್ಲಿ ವಿಶೇಷವಾಗಿ ಉಪಸ್ಥಿತರಿದ್ದು, ತಮ್ಮ ಮಾರ್ಗದರ್ಶನವನ್ನು ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಬೀನಾ ಸಾಗರ್, ವಿಜ್ಞಾನ ಶಿಕ್ಷಕಿಯ ಶ್ರೀಮತಿ ರೂಪ, ಗಣಿತ ಶಿಕ್ಷಕ ದಯಾನಂದ ಪಿ.ಡಿ., ಆಂಗ್ಲ ಭಾಷಾ ಶಿಕ್ಷಕ ಪೂರ್ಣೇಶ್, ಅತಿಥಿ ಶಿಕ್ಷಕಿಯರಾದ ಶ್ರೀಮತಿ ದೀಪಿಕಾ, ಕುಮಾರಿ ಪವಿತ್ರ, ಕುಮಾರಿ ಚಿತ್ರಲೇಖಾ ಅವರು ಶಿಬಿರದಲ್ಲಿ ತಮ್ಮ ಸಹಕಾರ ನೀಡಿದರು.
ವೃತ್ತಿ ಶಿಕ್ಷಣ ಶಿಕ್ಷಕಿಯರಾದ ಶ್ರೀಮತಿ ನೇತ್ರಾವತಿ ಎ.ಎಸ್ ಅವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದರು. ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಉತ್ಸಾಹಭರಿತವಾಗಿ ಪಾಲ್ಗೊಂಡು ಕಲಿಕೆ ಮತ್ತು ಮನರಂಜನೆಯನ್ನು ಒಟ್ಟಿಗೆ ಅನುಭವಿಸಿದರು. ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳು ತಮ್ಮ ಸೃಜನಾತ್ಮಕತೆ ಮತ್ತು ಕಲೆಗಳ ಪ್ರಗತಿಗೆ ಹೊಸ ಆಯಾಮ ನೀಡಿದರು.




