ಹೋಲಿ ಹಬ್ಬ ಆಚರಿಸಿದ್ದಕ್ಕೆ ವಲಸೆ ಕಾರ್ಮಿಕರ ಮೇಲೆ ದಾಳಿ! ಭಯದಿಂದ ರಾತ್ರೋರಾತ್ರಿ ಪರಾರಿಯಾದ 40ಕ್ಕೂ ಹೆಚ್ಚು ಜನ!

ಶೇರ್ ಮಾಡಿ

ಉಪ್ಪಿನಂಗಡಿ: ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ನೆಕ್ಕಿಲಾಡಿಯಲ್ಲಿ ಹೋಲಿ ಹಬ್ಬ ಆಚರಿಸಿದ್ದಕ್ಕೆ ಬಿಹಾರ ಮೂಲದ ವಲಸೆ ಕಾರ್ಮಿಕರ ಮೇಲೆ ದಾಳಿ ನಡೆದಿರುವ ಗಂಭಿರ ಪ್ರಕರಣ ಬೆಳಕಿಗೆ ಬಂದಿದೆ.

ಮೂಲಗಳ ಪ್ರಕಾರ, ಬಿಹಾರದಿಂದ ಬಂದ ಕಾರ್ಮಿಕರು ತಾವು ವಾಸಿಸುತ್ತಿದ್ದ ಬಾಡಿಗೆ ಮನೆಯಲ್ಲಿ ಹೋಲಿ ಹಬ್ಬವನ್ನು ಆಚರಿಸುತ್ತಿದ್ದರು. ಈ ವೇಳೆ ಸ್ಥಳೀಯ ಗುಂಪೊಂದು ಅವರ ಕೊಠಡಿಗೆ ನುಗ್ಗಿ ಮರದ ಬಡಿಗೆ ಮತ್ತು ಕಲ್ಲುಗಳನ್ನು ಬಳಸಿಕೊಂಡು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ದಾಳಿಯಿಂದ ಭಯಗೊಂಡ 40ಕ್ಕೂ ಹೆಚ್ಚು ವಲಸೆ ಕಾರ್ಮಿಕರು ತಕ್ಷಣವೇ ರಾತ್ರೋರಾತ್ರಿ ಪರಾರಿಯಾಗಿದ್ದಾರೆ. ಅವರ ಪ್ರಸಕ್ತ ಸ್ಥಿತಿ ಮತ್ತು ಅವರು ಎಲ್ಲಿ ಆಶ್ರಯ ಪಡೆದಿದ್ದಾರೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಹಲ್ಲೆ ನಡೆಸಿದ ಪುಂಡರು ಕಾರ್ಮಿಕರು ಹಬ್ಬಕ್ಕಾಗಿ ತಯಾರಿಸಿದ್ದ ತಿನಿಸುಗಳನ್ನು ನಾಶ ಮಾಡಿದ್ದು, ಕಟ್ಟಡದ ಮೇಲೂ ಕಲ್ಲು ಎಸೆದು ಹಾನಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಘಟನೆಯ ಕುರಿತಾಗಿ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

  •  

Leave a Reply

error: Content is protected !!