ಇಚ್ಲಂಪಾಡಿ:ನಿವೃತ್ತ ಸೈನಿಕರಾದ ಸುಭೇದಾರ್ ಡೀಕಯ್ಯ ಗೌಡ ಪೊಜ್ಜಾಲು ಹಾಗೂ ಹವಾಲ್ದಾರ್ ರೆಜಿ ಜಾನ್ ಮಡಿಪುರಿಗೆ ಗ್ರಾಮಸ್ಥರಿಂದ ಗೌರವಾರ್ಪಣಾ ಕಾರ್ಯಕ್ರಮ

ಶೇರ್ ಮಾಡಿ
Subedar Deekayya Gowda and Havaldar Reji John ichlampady kadaba taluk

ಇಚ್ಲಂಪಾಡಿ:ಭಾರತೀಯ ಸೇನೆ ಎಂದರೆ ಕೇವಲ ನಮ್ಮ ದೇಶದ ಭದ್ರತೆ ಮಾತ್ರವಲ್ಲ, ಅದು ಶೌರ್ಯ, ತ್ಯಾಗ ಮತ್ತು ದೇಶಭಕ್ತಿಯ ಪ್ರತೀಕ.ಸೈನಿಕರು ತಮ್ಮ ಜೀವನವನ್ನು ಪಣವಾಗಿಟ್ಟು ದೇಶವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುವದರಿಂದ ನಾವಿಂದು ದೇಶದಲ್ಲಿ ಸಂತೋಷದಿಂದ ಬದುಕುತ್ತಿದ್ದೇವೆ.ಅನೇಕ ವರ್ಷಗಳ ಕಾಲ ಸುಧೀರ್ಘ ದೇಶಸೇವೆಯನ್ನು ಸಲ್ಲಿಸಿ, ಗಡಿಯಲ್ಲಿ ಹಗಲಿರುಳು ಸೇವೆಗೈದು ನಿವೃತ್ತಿ ಹೊಂದಿ ಹುಟ್ಟೂರಾದ ಇಚ್ಲಂಪಾಡಿಗೆ ಆಗಮಿಸುತ್ತಿರುವ ನಿವೃತ್ತ ಸೈನಿಕರಾದ ಸುಭೇದಾರ್ ಡೀಕಯ್ಯ ಗೌಡ ಪೊಜ್ಜಾಲು ಹಾಗೂ ಹವಾಲ್ದಾರ್ ರೆಜಿ ಜಾನ್ ಮಡಿಪು ರವರುಗಳನ್ನು ದಿನಾಂಕ 23-03.2025ರ ಭಾನುವಾರದಂದು ಸಂಜೆ 5.00 ಗಂಟೆಗೆ ಸರಿಯಾಗಿ ನೇರ್ಲ,ಇಚ್ಲಂಪಾಡಿ ಬಸ್ ತಂಗುದಾಣದಿಂದ ಬರಮಾಡಿಕೊಂಡು ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಇಚ್ಲಂಪಾಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರಕ್ಕೆ ಸಾಗಿ ಗ್ರಾಮಸ್ಥರಿಂದ ಗೌರವಾರ್ಪಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ.

ಸುಭೇದಾರ್ ಡೀಕಯ್ಯ ಗೌಡ ಪೊಜ್ಜಾಲು ಅವರು 28 ವರ್ಷಗಳ ಕಾಲ ದೇಶಸೇವೆಗೆ ಸಮರ್ಪಿತರಾಗಿ, 28-02-2025 ರಂದು ನಿವೃತ್ತಿ ಪಡೆದಿದ್ದಾರೆ. ಭಾರತೀಯ ಸೇನೆಯ ವ್ಯವಸ್ಥೆಯಲ್ಲಿ ಅವರು ತಮ್ಮ ಅಮೂಲ್ಯ ಅನುಭವವನ್ನು ಹಂಚಿಕೊಂಡು, ಅನೇಕ ಯೋಧರನ್ನು ಮಾರ್ಗದರ್ಶನ ಮಾಡಿ, ದೇಶರಕ್ಷಣೆಗೆ ಅಮೋಘ ಕೊಡುಗೆ ನೀಡಿದ್ದಾರೆ.
ಹವಾಲ್ದಾರ್ ರೆಜಿ ಜಾನ್ ಮಡಿಪು ಅವರು 22 ವರ್ಷಗಳ ಕಾಲ ಪ್ರಾಮಾಣಿಕತೆ, ಶ್ರಮ ಮತ್ತು ತ್ಯಾಗದ ಪಥದಲ್ಲಿ ನಿಂತು, 31-01-2025 ರಂದು ನಿವೃತ್ತಿ ಪಡೆದಿದ್ದಾರೆ. ಭಾರತೀಯ ಸೇನೆಯ ಶಕ್ತಿಶಾಲಿ ಸಂಘಟನೆಯಲ್ಲಿ ಅವರು ನಿರಂತರ ಸೇವೆ ಸಲ್ಲಿಸಿ, ನಿಷ್ಠೆ ಮತ್ತು ಶೌರ್ಯದ ಬದುಕಿಗೆ ಮಾದರಿಯಾಗಿದ್ದಾರೆ.


ಸುಭೇದಾರ್ ಡೀಕಯ್ಯ ಗೌಡ ಪೊಜ್ಜಾಲು: ದೇಶ ಸೇವೆಗೆ ಮೀಸಲಾದ ಜೀವನ

ಭಾರತೀಯ ಸೇನೆಗೆ ತನ್ನ ಅಮೋಘ ಸೇವೆಯನ್ನು ಸಲ್ಲಿಸಿದ ಸುಭೇದಾರ್ ಡೀಕಯ್ಯ ಗೌಡ ಪೊಜ್ಜಾಲು ಅವರ ದೇಶಭಕ್ತಿಗೆ ನಮಿಸಬೇಕಾದ ಕ್ಷಣ. 28 ವರ್ಷಗಳ ಸೇವೆಯ ಯಶಸ್ವಿ ಮುಕ್ತಾಯದೊಂದಿಗೆ ಅವರು ದೇಶಕ್ಕಾಗಿ ಮಾಡಿದ ತ್ಯಾಗ ಹಾಗೂ ಪರಿಶ್ರಮವನ್ನು ಮರೆಯಲು ಸಾಧ್ಯವಿಲ್ಲ.

ಕುಟುಂಬ ಮತ್ತು ಶಿಕ್ಷಣ

ಸುಭೇದಾರ್ ಡೀಕಯ್ಯ ಗೌಡ ಪೊಜ್ಜಾಲು ಅವರ ಹುಟ್ಟೂರು ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಕೊರಮೇರು . ತಂದೆ ದಿವಂಗತ ವೀರಪ್ಪ ಗೌಡ ಮತ್ತು ತಾಯಿ ದಿವಂಗತ ಶಿವಮ್ಮ ಅವರ ಮಗನಾಗಿ 19-07-1976 ರಂದು ಜನಿಸಿದ ಅವರು, ಬಾಲ್ಯದಿಂದಲೇ ಶಿಸ್ತುಬದ್ಧ ಜೀವನ ನಡೆಸಿದ್ದರು.ಸುಭೇದಾರ್ ಡೀಕಯ್ಯ ಗೌಡ ಪೊಜ್ಜಾಲು ತಮ್ಮ ಕುಟುಂಬದಲ್ಲಿ ಎಲ್ಲರಿಗಿಂತ ಕಿರಿಯವರು.ಸುಭೇದಾರ್ ಡೀಕಯ್ಯ ಗೌಡ ಪೊಜ್ಜಾಲು ಅವರ ಪತ್ನಿ ಹೇಮಾವತಿ ಮತ್ತು ಅವರ ಇಬ್ಬರು ಮಕ್ಕಳು,ಪ್ರಿನ್ಸ್ ಪೊಜ್ಜಲ್ ಹಾಗೂ ಪ್ರಜ್ವಲ್ ಪೊಜ್ಜಲ್ ಅವರ ಈ ದೀರ್ಘ ಸೇವಾ ಸಾಧನೆಯನ್ನು ಹೆಮ್ಮೆಯಿಂದ ನೆನಸಿಕೊಳ್ಳುತ್ತಿದ್ದಾರೆ.
ಅವರ ಸಹೋದರರು – ಬೆಳಿಯಪ್ಪ, ವೆಂಕಪ್ಪ, ಮೋನಪ್ಪ, ದಯಾನಂದ. ಸಹೋದರಿಯರು – ದೇವಮ್ಮ, ಶೀತಮ್ಮ, ಮೋನಮ್ಮ, ಹರಿಣಾಕ್ಷಿ, ಸುಂದರಿ, ಭವಾನಿ, ಲಲಿತ.


ಅವರು ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಇಚ್ಲಂಪಾಡಿಯಲ್ಲಿ ಪೂರ್ಣಗೊಳಿಸಿದರು. ಹೈಸ್ಕೂಲ್ ಶಿಕ್ಷಣವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹೈಸ್ಕೂಲ್‌ನಲ್ಲಿ ಪಡೆದರು. ಅವರ ಪದವಿ ಪೂರ್ವ ಶಿಕ್ಷಣ ಸಂತ ಜೋರ್ಜ್ ಪದವಿ ಪೂರ್ವ ಕಾಲೇಜು, ನೆಲ್ಯಾಡಿಯಲ್ಲಿ (1995-1996) ಪೂರ್ತಿಗೊಳಿಸಿದರು.

ಡೀಕಯ್ಯ ಗೌಡ ಅವರು 25-02-1997 ರಂದು ಭಾರತೀಯ ಭೂಸೇನೆಯಲ್ಲಿ ಸೇರ್ಪಡೆಗೊಂಡರು. ತಮ್ಮ ಸೇವಾ ಅವಧಿಯಲ್ಲಿ ಭಾರತದೆಲ್ಲೆಡೆ ವಿವಿಧ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ:

25/02/1997 -21/07/1997
1997: AOC ಸೆಂಟರ್, ಸಿಕಂದರಾಬಾದ್ (ಮೂಲಭೂತ ತರಬೇತಿ)

22/07/1997
02/04/1998: CMM ಜಬಲ್ಪುರ್ (ಮಿಲಿಟರಿ ಕಾಲೇಜ್ ಆಫ್ ಮೆಟೀರಿಯಲ್ಸ್ ಮ್ಯಾನೇಜ್‌ಮೆಂಟ್)

03/04/1998
05/06/2000: 19 Infantry DOu, ಜಮ್ಮು ಮತ್ತು ಕಾಶ್ಮೀರ (CIOPS Field)

06/06/2000
04/11/2002: COD Dehu Road, ಪುಣೆ

04/12/2002
19/01/2005: 24 Field Ammunition Depot, ಶ್ರೀ ಗಂಗಾನಗರ (ರಾಜಸ್ಥಾನ)

20/10/2005
01/12/2008: OSS 506 ABW, ಜಬಲ್ಪುರ್ (ಮಧ್ಯಪ್ರದೇಶ)

02/12/2008
19/01/2012: 5 Field Ordnance Depot, ಬೆಂಗ್ಡುಬಿ (ಪಶ್ಚಿಮ ಬಂಗಾಳ)

20/01/2012
28/11/2013: 2 Field Ordnance Depot, ಶ್ರೀನಗರ (ಜಮ್ಮು ಮತ್ತು ಕಾಶ್ಮೀರ)

24/11/2013
16/01/2017: ಆರ್ಮಿ ಹೆಡ್‌ಕ್ವಾರ್ಟರ್, ನವದೆಹಲಿ

17/01/2017
23/01/2019: 222 Army Base Ordnance Depot, ಗುವಾಹಟಿ (ಅಸ್ಸಾಂ) (OP RINO FIELD)

24/01/2019
26/06/2021: Static WKSP EMG, MHOW (ಮಧ್ಯಪ್ರದೇಶ)

27/06/2021
09/02/2025: CAFVD, ಕಿರ್ಕೀ ಪುಣೆ

28 ವರ್ಷಗಳ ಸೇವೆಯಲ್ಲಿ ಸುಭೇದಾರ್ ಡೀಕಯ್ಯ ಗೌಡ ಅವರು ಹಲವಾರು ತ್ಯಾಗ, ಪರಿಶ್ರಮ ಮತ್ತು ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿ, ಅಕ್ಷರಶಃ ದೇಶ ರಕ್ಷಣೆಗೆ ತಮ್ಮ ಜೀವನವನ್ನು ಮೀಸಲಿಟ್ಟರು.
ಅವರ ದೇಶಪ್ರೇಮ ಮತ್ತು ಶ್ರದ್ಧೆಯು ಮುಂದಿನ ಪೀಳಿಗೆಗೆ ಮಾದರಿಯಾಗಿದೆ.

ಹವಾಲ್ದಾರ್ ರೆಜಿ ಜೋನ್ ಸೇವಾ ನಿವೃತ್ತಿ

ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಹೆಮ್ಮೆ, ಹವಾಲ್ದಾರ್ ರೆಜಿ ಜೋನ್ ಅವರು ತಮ್ಮ ಅತ್ಯುನ್ನತ ಸೇನಾ ಸೇವೆಯನ್ನು ಪೂರ್ಣಗೊಳಿಸಿ 2025ರ ಜನವರಿ 31ರಂದು ಮಹಾರಾಷ್ಟ್ರದ ನಾಸಿಕ್ ನಿಂದ ಗೌರವಾನ್ವಿತ ಸೇವಾ ನಿವೃತ್ತಿ ಹೊಂದಿದ್ದಾರೆ.

ವಿದ್ಯಾಭ್ಯಾಸ ಮತ್ತು ಸೇನೆಗೆ ಪ್ರವೇಶ

31-07-1982 ರಂದು ಜೋನ್ ಪೀಟರ್ (ತಂಬಿ) ಮತ್ತು ಸಾರಮ್ಮ ದಂಪತಿಯ ಮನೆಯಲ್ಲಿ ಜನಿಸಿದ ರೆಜಿ ಜೋನ್, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನೇರ್ಲ – ಇಚ್ಲಂಪಾಡಿಯಲ್ಲಿ ಪೂರ್ಣಗೊಳಿಸಿ, ಪ್ರೌಢ ಶಿಕ್ಷಣವನ್ನು ನೂಜಿಬಾಳ್ತಿಲದ ಜ್ಞಾನೋದಯ ಬೆಥನಿ ಶಾಲೆಯಲ್ಲೂ . ನಂತರ, ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣವನ್ನು ಮುಗಿಸಿದರು.
2003ರ ಜನವರಿ 16ರಂದು ಭಾರತೀಯ ಭೂಸೇನೆಗೆ ಆಯ್ಕೆಯಾದ ರೆಜಿ ಜೋನ್ ಅವರು ಹೈದರಾಬಾದ್‌ನಲ್ಲಿ ಪ್ರಾರಂಭಿಕ ಸೇನಾ ತರಬೇತಿಯನ್ನು ಪಡೆದರು.

ಭಾರತೀಯ ಸೇನೆಯಲ್ಲಿ ಅತ್ಯುನ್ನತ ಸೇವೆ
ರೆಜಿ ಜೋನ್ ಅವರು ತಮ್ಮ ಸೇವಾ ಅವಧಿಯಲ್ಲಿ ಭಾರತದೆಲ್ಲೆಡೆ ವಿವಿಧ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ:
2004 – 2005: ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್
2006 – 2007: ಆಂಧ್ರಪ್ರದೇಶದ ಸಿಕಂದರಾಬಾದ್
2008 – 2009: ಜಮ್ಮು ಮತ್ತು ಕಾಶ್ಮೀರದ ನೌಗಮ್
2010 – 2011: ಪಶ್ಚಿಮ ಬಂಗಾಳ
2012 – 2013: ಪಂಜಾಬ್‌ನ ಜಲಂಧರ್
2014 – 2016: ಅಸ್ಸಾಂನ ಡಿಂಜಾನ್
2017 – 2019: ಮಹಾರಾಷ್ಟ್ರದ ನಾಸಿಕ್
2020 – 2021: ಜಮ್ಮು ಮತ್ತು ಕಾಶ್ಮೀರದ ಲೇಹ್ ಲಡಾಕ್
2022 – 2024: ಅಸ್ಸಾಂನ ಮಿಸ್ಸಾಮರಿ

ಹವಾಲ್ದಾರ್ ರೆಜಿ ಜೋನ್ ಅವರ ಪತ್ನಿ ರಮ್ಯಾ ಮತ್ತು ಅವರ ಇಬ್ಬರು ಮಕ್ಕಳು, ರೋಷನ್ ರೆಜಿ ಹಾಗೂ ರಿಯಾನ್ ರೆಜಿ, ಅವರ ಈ ದೀರ್ಘ ಸೇವಾ ಸಾಧನೆಯನ್ನು ಹೆಮ್ಮೆಯಿಂದ ನೆನಸಿಕೊಳ್ಳುತ್ತಿದ್ದಾರೆ.
ಸೇವೆ ನಿರ್ವಹಿಸಿದ ಸುಮಾರು 22 ವರ್ಷಗಳ ಅವಧಿಯಲ್ಲಿ, ಭಾರತ ದೇಶದ ರಕ್ಷಣೆಯಲ್ಲಿ ಸೇವೆ ಸಲ್ಲಿಸಿದ ಹವಾಲ್ದಾರ್ ರೆಜಿ ಜೋನ್ ಅವರ ಸೇವೆ ನಮಗೆಲ್ಲಾ ಪ್ರೇರಣೆ. ಸೇನೆಯ ಮೂಲಕ ದೇಶ ಸೇವೆ ಮಾಡಿದ ಅವರ ತ್ಯಾಗ ಮತ್ತು ಶ್ರಮ ಸದಾಕಾಲ ಮೆಚ್ಚುಗೆಗೆ ಪಾತ್ರವಾಗಲಿದೆ.

  •  

Leave a Reply

error: Content is protected !!