ಇಂಡಿಯನ್ ಸಮೂಹ ಸಂಸ್ಥೆಗಳ 20ನೇ ವರ್ಷದ ಸಂಭ್ರಮಾಚರಣೆ ಐಜಿಐ ಸಂಭ್ರಮ-2025 ,ಕಳೆದ ಭಾನುವಾರದಂದು ಹೋಟೆಲ್ ದೀಪಾ ಕಂಫರ್ಟ್ ಶಹನಾಯಿ ಸಭಾಂಗಣದಲ್ಲಿ ನಡೆಯಿತು. ಇಂಡಿಯನ್ ಸಮೂಹ ಸಂಸ್ಥೆಯ ನಿರ್ದೇಶಕ ಮುರಳಿ ಹೊಸಮಜಲು ಅವರ ಮಾತೃಶ್ರೀ ದಿ. ರಾಜಮ್ಮ ಸ್ಮರಣಾರ್ಥವಾಗಿ ಶ್ರೀಮತಿ ರಾಜಮ್ಮ ಸ್ಮಾರಕ ಶಿಕ್ಷಣ ಮತ್ತು ಚಾರಿಟೆಬಲ್ ಟ್ರಸ್ಟ್‌ನ್ನು ಉದ್ಘಾಟಿಸಲಾಯಿತು.
ಪತ್ರಿಕಾ ರಂಗದಲ್ಲಿ ಭಾಸ್ಕರ್ ರೈ, ಕಲಾ ಕ್ಷೇತ್ರದಲ್ಲಿ ವಿಪಿನ್ ಪುರುಪು, ಸಮಾಜ ಸೇವೆಯಲ್ಲಿ ಶಾರದಾ ಕದ್ರಿ ಮತ್ತು ಆಕಾಶ್ ಕರ್ಕೇರ, ಸಿಡಿಎಸ್ ಪರೀಕ್ಷೆಯಲ್ಲಿ 100ನೇ ಶ್ರೇಣಿಯಲ್ಲಿ ಉತ್ತೀರ್ಣರಾದ ಅಧ್ವೈತ್ ನಾರಾಯಣ್ ಅವರನ್ನು ಗೌರವಿಸಲಾಯಿತು.
ಎಲ್‌ಎಪಿಟಿ ಅಂತಾರಾಷ್ಟ್ರೀಯ ಪ್ರಶಸ್ತಿ ಮಾನ್ಯತೆ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮುರಳಿ ಹೊಸಮಜಲು ಅವರಿಗೆ ಏವಿಯೇಶನ್ ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಸೇವೆಗಾಗಿ ಲಂಡನ್ ಅಕಾಡೆಮಿ ಆಫ್ ಪ್ರೊಫೆಷನಲ್ ಟ್ರೇನಿಂಗ್ ಸಂಸ್ಥೆ ವತಿಯಿಂದ ಮಾಸ್ಟರ್ ಟ್ರೈನರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು, ಏವಿಯೇಷನ್, ಕಂಪ್ಯೂಟರ್, ಲಾಜಿಸ್ಟಿಕ್ಸ್ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು
ಇಂಡಿಯನ್ ಸಮೂಹ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮುರಳಿ ಹೊಸ ಮಜಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿರ್ದೇಶಕಿ ಸಜಿತಾ ಎಂ. ನಾಯರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಸಚಿವ ರಮಾನಾಥ ರೈ, ಲಂಡನ್ ಅಕಾಡೆಮಿ ಆಫ್ ಪ್ರೊಫೆಷನಲ್ ಟೈನಿಂಗ್ ಯುಕೆ ಸಂಸ್ಥೆ ಅಧ್ಯಕ್ಷ ವಿಜಯ್ ಭಾಗವಹಿಸಿದ್ದರು.
ವಿಶೇಷ ಆಹ್ವಾನಿತರಾಗಿ ನಮ್ಮ ಕುಡ್ಲ 24X7 ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕದ್ರಿ ನವನೀತ್ ಶೆಟ್ಟಿ, ಹಿರಿಯ ಪತ್ರಕರ್ತ ಹಾಗೂ ಲೇಖಕ ಜಯಂತ್ ಕೊಡ್ಕಣಿ, ಚಲನಚಿತ್ರ ನಿರ್ದೇಶಕ ವಿಜಯ್ ಕುಮಾರ್, ನಟ ಸ್ವರಾಜ್ ಶೆಟ್ಟಿ, ಚಲನಚಿತ್ರ, ನಾಟಕ ಕಲಾವಿದೆ ರೂಪ ವರ್ಕಾಡಿ, ಸಂತ ಜಾರ್ಜ್ ಸಮೂಹ ಸಂಸ್ಥೆಗಳ ಮಾಜಿ ಪ್ರಿನ್ಸಿಪಾಲ್ ಅಬ್ರಾಹಂ ವರ್ಗೀಸ್, ಕರ್ನಾಟಕ ಪಾಲಿಟೆಕ್ನಿಕ್ ಮಾಜಿ ಪ್ರಿನ್ಸಿಪಾಲ್ ಡಾ. ಅಬ್ದುಲ್ ಖಾದರ್, ವಕೀಲ ಪ್ರಸಾದ್ ರೈ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕಿ ಚೈತ್ರಾ ಸ್ವಾಗತಿಸಿ ದರು. ಶಿಕ್ಷಕಿ ಅವನಿ ಪಾರ್ವತಿ ವಂದಿಸಿದರು. ಕದ್ರಿ ನವನೀತ್ ಶೆಟ್ಟಿ ಹಾಗೂ ಸಿಂಧು ಎನ್. ನಿರೂಪಿಸಿದರು.