


ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶವಾದ ನೇಲ್ಯಡ್ಕದಲ್ಲಿರುವ ಸರ್ಕಾರಿ ಪ್ರೌಢ ಶಾಲೆಗೆ ಬ್ಯಾಂಕ್ ಆಫ್ ಬರೋಡಾದ ಉದನೆ ಶಾಖೆಯು ಒಂದು ಕಪಾಟನ್ನು ಹಾಗೂ ನೇರಳೆ ಹಣ್ಣಿನ ಗಿಡವನ್ನು ಕೊಡುಗೆಯಾಗಿ ನೀಡಿದೆ. ಶಾಖಾ ಮ್ಯಾನೇಜರ್ ನಿತಿನ್ ಕೃಷ್ಣ ಅವರು ಈ ವಸ್ತುಗಳನ್ನು ಶಾಲೆಗೆ ಹಸ್ತಾಂತರಿಸಿ ಶುಭ ಹಾರೈಸಿದರು.

ಶಾಲೆಯ ಕೋರಿಕೆಯನ್ನು ಪರಿಗಣಿಸಿ ಸಹಾಯ ಹಸ್ತ ಚಾಚಿದ ಬ್ಯಾಂಕಿಗೆ, ಮುಖ್ಯಶಿಕ್ಷಕ ರಾಜೇಂದ್ರ ಕೃಷ್ಣ ಅವರು ಧನ್ಯವಾದ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ಹಿರಿಯ ಅಧಿಕಾರಿ ಪೌಲೌಸ್ ಪಿ.ಸಿ., ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅರವಿಂದ ಗೋಖಲೆ ಸ್ವಾಗತಿಸಿದರು. ಉದಯಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ವಿಜಯಕುಮಾರ್ ವಂದಿಸಿದರು.




