


ವಿಟ್ಲ: ಎರಡು ದಿನಗಳಿಂದ ಅಪಾಯಕಾರಿ ರೀತಿಯಲ್ಲಿ ವಿಟ್ಲ -ಮುಡಿಪು ಮಧ್ಯೆ ಸಂಚರಿಸುತ್ತಿದ್ದ ಖಾಸಗಿ ಬಸ್ಸನ್ನು ಸಾರ್ವಜನಿಕರು ತಡೆದು ವಿಟ್ಲ ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಟ್ಲ-ಮುಡಿಪು-ಮಂಗಳೂರು ಮಧ್ಯೆ ಸಂಚರಿಸುವ ಖಾಸಗಿ ಬಸ್ಸಿನಲ್ಲಿ ಹಿಂದಿನ ಎಡಬದಿಯಲ್ಲಿ ಒಂದೇ ಟಯರಲ್ಲಿ ಸಂಚರಿಸುತ್ತಿತ್ತು. ಇನ್ನೊಂದು ಟಯರ್ ಒಡೆದು ಕರ್ಕಶ ಶಬ್ದ ಬರುತ್ತಿದ್ದರೂ ಚಾಲಕ, ಕಂಡಕ್ಟರ್ ಅದರ ಗೋಜಿಗೇ ಹೋಗಿಲ್ಲವಾಗಿದೆ. ಶನಿವಾರ ಮಧ್ಯಾಹ್ನದಿಂದ ಭಾನುವಾರ ಮಧ್ಯಾಹ್ನ ತನಕ ವಿಟ್ಲ ಮುಡಿಪು ಮಂಗಳೂರು ಮಧ್ಯೆ ಅಪಾಯಕಾರಿ ರೀತಿಯಲ್ಲಿ ಸಂಚರಿಸುತ್ತಾ ಪ್ರಯಾಣಿಕರ ಪ್ರಾಣದಲ್ಲಿ ಬಸ್ ಸಿಬ್ಬಂದಿಗಳು ಚೆಲ್ಲಾಟ ಆಡುತ್ತಿದ್ದರೆಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಸಾರ್ವಜನಿಕರು ಸಾಲೆತ್ತೂರು ಪೇಟೆಯಲ್ಲಿ ಬಸ್ಸನ್ನು ತಡೆಹಿಡಿದು ವಿಟ್ಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಬಂಟ್ವಾಳ ಸಾರಿಗೆ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ.




