ಕುರಾಯ ಶ್ರೀ ಸದಾಶಿವ ದೇವಸ್ಥಾನದ ಜಾತ್ರೆಗೆ ಶ್ರಮದಾನದಿಂದ ಚಾಲನೆ

ಶೇರ್ ಮಾಡಿ

ಬಂದಾರು: ಏಪ್ರಿಲ್ 2 ರಿಂದ 10 ರವರೆಗೆ ನಡೆಯುವ ಕುರಾಯ ಶ್ರೀ ಸದಾಶಿವ ದೇವಳದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈರೋಳ್ತಡ್ಕ ಒಕ್ಕೂಟ ಹಾಗೂ ವಿವಿಧ ಸಂಘ ಸಂಸ್ಥೆಗಳ ಒಗ್ಗೂಡುವಿಕೆಯಲ್ಲಿ ಶ್ರಮದಾನ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಗೌಡ ಮಡ್ಯಲಕಂಡ, ಸದಸ್ಯರುಗಳಾದ ವೆಂಕಟ್ರಮಣ ಗೌಡ ಬಾಳೆಹಿತ್ತಿಳು, ದಮಯಂತಿ ಪಾಂಜಾಳ, ಲಕ್ಷಣ ನಾಯ್ಕ ಮುಂಡೂರು, ನಿರಂಜನ ಗೌಡ ನಡುಮಜಲು, ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಪದ್ಮುಂಜ ಸಿ ಎ ಬ್ಯಾಂಕ್ ಉಪಾಧ್ಯಕ್ಷ ಅಶೋಕ ಗೌಡ ಪಾಂಜಾಳ, ನಿರ್ದೇಶಕರಾದ ಪ್ರಸಾದ್ ಗೌಡ ಅಂಡಿಲ, ಮೈರೋಳ್ತಡ್ಕ ಒಕ್ಕೂಟ ಸೇವಾಪ್ರತಿನಿಧಿ ಚಂದ್ರಕಲಾ, ಒಕ್ಕೂಟ ಅಧ್ಯಕ್ಷ ಸುಂದರ ಪೂಜಾರಿ, ಜಾತ್ರೋತ್ಸವ ಸಮಿತಿಯ ಭರತ್ ಗೌಡ ಸೇರಿದಂತೆ ಭಕ್ತಾಭಿಮಾನಿಗಳು ಭಾಗವಹಿಸಿದ್ದರು.

  •  

Leave a Reply

error: Content is protected !!