ಸುಳ್ಯ ನೆಹರು ಸ್ಮಾರಕ ಕಾಲೇಜಿನಲ್ಲಿ ಕಡಬ-ಸುಳ್ಯ ವಲಯ ಎನ್‌ಎಸ್‌ಎಸ್ ಉತ್ಸವ

ಶೇರ್ ಮಾಡಿ

ನೆಲ್ಯಾಡಿ: ಕಡಬ-ಸುಳ್ಯ ವಲಯದ ಎನ್ ಎಸ್ ಎಸ್ ಉತ್ಸವವು ಎ.1ರಂದು ನೆಹರು ಮೆಮೋರಿಯಲ್ ಕಾಲೇಜು, ಸುಳ್ಯದಲ್ಲಿ ವಿಜೃಂಭಣೆಯಿಂದ ನಡೆಯಿತು.

ಈ ಉತ್ಸವವು ಎನ್‌ಎಸ್ಎಸ್ ಸ್ವಯಂಸೇವಕರಲ್ಲಿ ನಾಯಕತ್ವ ಕೌಶಲ್ಯ, ಸಾಮಾಜಿಕ ಜಾಗೃತಿ ಮತ್ತು ಸಮುದಾಯ ಸೇವಾ ಮನೋಭಾವವನ್ನು ಉತ್ತೇಜಿಸುವ ಮಹತ್ವದ ವೇದಿಕೆಯಾಗಿದ್ದು, ವಿವಿ ಕಾಲೇಜು ನೆಲ್ಯಾಡಿಯ ಎಂಟು ವಿದ್ಯಾರ್ಥಿಗಳ ತಂಡ ಈ ಉತ್ಸವದಲ್ಲಿ ಭಾಗವಹಿಸಿ, ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದರು.

ಉತ್ಸವದ ಅಂಗವಾಗಿ ಭಾಷಣ, ಕೊಲಾಜ್, ರಂಗೋಲಿ, ಮುಖಚಿತ್ರಣ ಮತ್ತು ದೇಶಭಕ್ತಿಗೀತೆ ಸೇರಿದಂತೆ ಐದು ಸ್ಪರ್ಧೆಗಳಲ್ಲಿ ನಡೆದ ಎಲ್ಲಾ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡರು.

ಗಾನ ಸ್ಪರ್ಧೆಯಲ್ಲಿ ವಿ.ವಿ. ಕಾಲೇಜು ನೆಲ್ಯಾಡಿಯ ದ್ವಿತೀಯ ಬಿಎ ವಿದ್ಯಾರ್ಥಿನಿ ಜಯಲಕ್ಷ್ಮಿ ಪ್ರಥಮ ಸ್ಥಾನವನ್ನು ಮತ್ತು ರಂಗೋಲಿ ಸ್ಪರ್ಧೆಯಲ್ಲಿ ದ್ವಿತೀಯ ಬಿಎ ವಿದ್ಯಾರ್ಥಿನಿಗಳಾದ ಪವಿತ್ರ ಹಾಗೂ ಪೂರ್ಣಿಮಾ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ವಿಶ್ವವಿದ್ಯಾನಿಲಯ ಕಾಲೇಜು ನೆಲ್ಯಾಡಿಯ ಸಂಯೋಜಕರಾದ ಡಾ.ಸುರೇಶ್ ಅವರ ಮಾರ್ಗದರ್ಶನದಲ್ಲಿ ಎನ್ಎಸ್ಎಸ್ ಯೋಜನಾಧಿಕಾರಿ ಶ್ರೀಮತಿ ಶ್ರುತಿ ಅವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಕಾಲೇಜಿಗೆ ಗೌರವ ತಂದಿರುತ್ತಾರೆ.

  •  

Leave a Reply

error: Content is protected !!