

ಚಿಕ್ಕಮಗಳೂರು ಜಿಲ್ಲೆಯ ಮಾಗಲು ಗ್ರಾಮದಲ್ಲಿ ರತ್ನಾಕರ್ ಎಂಬುವವರು ತಮ್ಮ ಕುಟುಂಬದ ಮೇಲೆ ಗುಂಡು ಹಾರಿಸಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಭಯಾನಕ ಘಟನೆ ನಡೆದಿದೆ.
ಈ ಕೃತ್ಯದಲ್ಲಿ ಅತ್ತೆ ಜ್ಯೋತಿ (50), ನಾದಿನಿ ಸಿಂಧು (26), ಮಗಳು ಮೌಲ್ಯಾ (7) ಮೃತಪಟ್ಟಿದ್ದಾರೆ. ಅವರ ಪತಿ ಅವಿನಾಶ್ ಗೂಂಡೇಟು ಹೊಡೆದಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಲೆ ಮಾಡಿದ ಬಳಿಕ ರತ್ನಾಕರ್ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಡಬಗೆರೆ ಸಮೀಪದ ಪೂರ್ಣಪ್ರಜ್ಞಾ ಶಾಲೆಯ ಡ್ರೈವರ್ ಆಗಿದ್ದ ರತ್ನಾಕರ್, ಈ ಭೀಕರ ಘಟನೆಗೆ ಮುನ್ನ ಸೆಲ್ಫಿ ವಿಡಿಯೋ ಮಾಡಿ ತನ್ನ ನೋವನ್ನು ತೋಡಿಕೊಂಡಿದ್ದಾರೆ. ಹೆಂಡತಿ ಬಿಟ್ಟು ಹೋಗಿದ್ದ ದುಃಖದಲ್ಲಿ ಈ ಕೃತ್ಯ ಎಸಗಿರುವುದಾಗಿ ವಿಡಿಯೋದಲ್ಲಿ ಹೇಳಿದ್ದಾರೆ.
ಹೊಸತೊಡಕು ಹಬ್ಬದ ಪ್ರಯುಕ್ತ ಜ್ಯೋತಿ ತಮ್ಮ ಮೊಮ್ಮಗಳು ಮೌಲ್ಯಾ ನ್ನು ಶಾಲೆಯಿಂದ ಮನೆಗೆ ಕರೆತಂದಿದ್ದರು. ರತ್ನಾಕರ್ ತನ್ನ ಹೆಂಡತಿ ಹಬ್ಬಕ್ಕೆ ಬರುತ್ತಾಳೆ ಎಂಬ ನಂಬಿಕೆಯಲ್ಲಿದ್ದು, ಆದರೆ ನಿರೀಕ್ಷೆಗೆ ವಿರುದ್ಧವಾಗಿ ಕುಟುಂಬಸ್ಥರ ಮೇಲೆಯೇ ಗುಂಡು ಹಾರಿಸಿ ಭೀಕರ ಕೃತ್ಯ ಎಸಗಿದ್ದಾರೆ.
ಈ ಬಗ್ಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಿಕ್ಕಮಗಳೂರು ಎಸ್‌ಪಿ ವಿಕ್ರಮ್ ಆಮ್ಟೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








