

ಮುಸ್ಸಂಜೆ ವೇಳೆಯಲಿ..
ಪಡುವಣ ದಿಕ್ಕಿನ ಬಾನಂಚಿನಲಿ
ಸರಿದಾಗ ಬೆಳಕಿನ ಪರದೆ
ಬಾನರವಿ ರಥವೇರಿ ಹೊರಡುತಿರಲು
ಆವರಿಸುತಿರೆ ಇರುಳು ಆಗಸದ ಊರಿನಲಿ
ಚಂದಿರನ ಒಡೆತನದಿ ತಾರೆಗಳು ಮಿನುಗುತಲಿ
ಬಾನಂಗಳದ ಬೆಳ್ಳಿ ಪರದೆಯಲಿ
ಚಂದಿರನ ಚೆಲುವು ನೋಡಲ್ಲಿ
ಆಗಸದಲಿ ಅರ್ಧ ಚಂದಿರ ನೀನು
ನನ್ನ ನೋಡಿ ನಗೆಯ ಬೀರುವೆಯೇನೋ
ಸಂತಸದಿ ನಾ ನಿನ್ನ ಸನಿಹದೆಲ್ಲೆಡೆಗೆ
ಬರುವೆನೆಂದು ಸಂದೇಶ ಸಾರಲೇನೋ
ಹುಣ್ಣಿಮೆ ದಿನ ನೀನಾಗುವೆ ಪೂರ್ಣ ಚಂದಿರ
ಬಯಕೆ ನನಗಿದೆ ಕಟ್ಟಲು ನಿನಗೊಂದು ಮಂದಿರ
ಸಂತಸದ ಅಲೆಯ ಅಬ್ಬರದಿಂದಿಹುದು ಸಾಗರ
ಹೇಳುತಿದೆ ನಿನ್ನೂರದು ವಿಸ್ಮಯ ನಗರ
ಓ ಚಂದಿರನೇ ನಾ ನಿನ್ನ ಬಂಧಿಸಲೆಂದೇ
ಬೊಗಸೆಯಲ್ಲಿ ಹಿಡಿದಿಟ್ಟುಕೊಳ್ಳುವೆ ನೀರು
ಬಂದೆನ್ನ ಬೊಗಸೆಯಲಿ ನಿನ್ನ ಬಿಂಬವ ತೋರು
ಬೊಗಸೆಯ ನೀರು ಸೋರಿದ ಮೇಲೆ ಹೇಗೆಬಂಧಿಸಲಿ ನಿನ್ನ ಹೇಳು?

✍🏻 ವಿಜೇತ, ದ್ವಿತೀಯ ಪಿಯುಸಿ. ಕಲಾ ವಿಭಾಗ.
ಸಂತ ಜಾರ್ಜ್ ಪದವಿ ಪೂರ್ವ ಕಾಲೇಜು ನೆಲ್ಯಾಡಿ. ದ.ಕ.








