


ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆಗೈದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕಲಬುರಗಿ ನಗರದ ಗಾಬರೆ ಲೇಔಟ್ ಅಪಾರ್ಟ್ಮೆಂಟ್‌ವೊಂದರಲ್ಲಿ ಭಯಾನಕ ಘಟನೆ ನಡೆದಿದೆ.
ಮೃತರನ್ನು ಸಂತೋಷ್ ಕೊರಳ್ಳಿ (45), ಪತ್ನಿ ಶೃತಿ (35), ಮಕ್ಕಳಾದ ಮುನಿಶ್ (9) ಮತ್ತು ಮೂರು ತಿಂಗಳ ಅನಿಶ್ ಎಂದು ಗುರುತಿಸಲಾಗಿದೆ. ಪರಸ್ಪರ ಜಗಳದ ನಡುವೆ ಮನಸ್ಥಾಪಗೊಂಡ ಸಂತೋಷ್ ಮೊದಲು ಪತ್ನಿ ಹಾಗೂ ಮಕ್ಕಳನ್ನು ಕೊಂದು, ನಂತರ ಮನೆಯಲ್ಲಿದ್ದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಂತೋಷ್ ಮತ್ತು ಶೃತಿಯ ನಡುವೆಯೇ ಆಗಾಗ ಕಲಹ ನಡೆಯುತ್ತಿದ್ದಂತೆ ಕಂಡುಬಂದಿದ್ದು, ನಿರಂತರ ಜಗಳಗಳಿಂದ ಬೇಸತ್ತ ಸಂತೋಷ್ ಈ ಭೀಕರ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಡಾ. ಶರಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.








