ಸೈಂಟ್ ಆನ್ಸ್ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ಶೇರ್ ಮಾಡಿ
KADABA

ಕಡಬ: ಕಡಬದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವು ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಸ್ಥೆಯ ಸಂಚಾಲಕರಾದ ವಂದನೀಯ ಪ್ರಕಾಶ್ ಪೌಲ್ ಡಿಸೋಜ ಅವರು, “ಜೀವನದ ಒಂದು ಅಧ್ಯಾಯ ಮುಗಿದಾಗ ಮತ್ತೊಂದು ಅಧ್ಯಾಯ ಆರಂಭವಾಗುತ್ತದೆ. ಈ ಹೊಸ ಪ್ರವಾಸದಲ್ಲಿ ನಿಮ್ಮ ಭವಿಷ್ಯ ಉಜ್ವಲವಾಗಲಿ” ಎಂದು ಆಶೀರ್ವಚನ ನೀಡಿದರು.

ದೈಹಿಕ ಶಿಕ್ಷಕರಾದ ಅರುಣ್ ಕುಮಾರ್ ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳು ಶುಭಾಶಯ ಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಕಲಾತ್ಮಕ ಮೆರುಗು ನೀಡಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಲಿಯೋನ, ಆರ್ಯಾನಂದ ಮತ್ತು ಪ್ರಸಿದ್ಧಿ ಅವರು ತಮ್ಮ ಶಾಲಾ ಜೀವನದ ಸ್ಮೃತಿಗಳನ್ನು ಹಂಚಿಕೊಂಡರು.

ಶಾಲಾ ಪ್ರಾಂಶುಪಾಲರಾದ ವಂದನೀಯ ಅಮಿತ್ ಪ್ರಕಾಶ್ ರೋಡ್ರಿಗಸ್ ಹಾಗೂ ಶಿಕ್ಷಕಿ ಶಾಂತಿಪ್ರಿಯಾ ಅವರು ಮಕ್ಕಳಿಗೆ ಶುಭ ಹಾರೈಸಿ, ಭಾವನಾತ್ಮಕ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ದಕ್ಷಾ, ಇತರೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿ ಸಿರಿಲ್ ಸ್ವಾಗತಿಸಿ, ಸಿಂಚನ್ ವಂದಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಅಕ್ಷಯ್ ಗೋಖಲೆ ಮಾಡಿದರು. ಈ ಸಮಾರಂಭವನ್ನು 9ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಾದ ಆನಿ ಜೋಸೆಫ್ ಮತ್ತು ಫಿಲೋಮಿನ ಜತೆಗೂಡಿ ಯಶಸ್ವಿಯಾಗಿ ಆಯೋಜಿಸಿದರು.

cricket
  •  

Leave a Reply

error: Content is protected !!