

ಬೆಳ್ತಂಗಡಿ: ಪ್ರವೀಣ್ ನೆಟ್ಟರ್ ಕೊಲೆ ಪ್ರಕರಣದ ಆರೋಪಿ, ಬೆಳ್ಳಾರೆಯ ನಿವಾಸಿ ಸಾಫಿ ಬೆಳ್ಳಾರೆಯನ್ನು ಮೇ 7ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಾಡಿ ವಾರಂಟ್ ಮೂಲಕ ಪರಪ್ಪನ ಅಗ್ರಹಾರ ಜೈಲಿನಿಂದ ಸಾಫಿಯನ್ನು ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆಯ ನಂತರ ಅವನನ್ನು ಮರಳಿ ಬೆಂಗಳೂರು ಜೈಲಿಗೆ ಕರೆದೊಯ್ಯಲಾಯಿತು.

ಈ ಪ್ರಕರಣ 2017ರಲ್ಲಿ ಆರ್‌ಎಸ್‌ಎಸ್ ಮತ್ತು ಕಲ್ಲಡ್ಕ ಭಟ್ ವಿರುದ್ಧ ಸಾಫಿ ಬೆಳ್ಳಾರೆಯು ಮಾಡಿದ ಉದ್ರೇಕಕಾರಿ ಭಾಷಣದ ಸಂಬಂಧಿತವಾಗಿದೆ. ಸಾಫಿ, ಪ್ರವೀಣ್ ನೆಟ್ಟರ್ ಹತ್ಯೆ ಪ್ರಕರಣದಲ್ಲಿ ಎರಡು ವರ್ಷಗಳ ಹಿಂದೆ ಎನ್‌ಐಎ ಅಧಿಕಾರಿಗಳಿಂದ ಬಂಧಿತನಾಗಿ, ಈವರೆಗೆ ನ್ಯಾಯಾಂಗ ಬಂಧನದಲ್ಲೇ ಉಳಿದಿದ್ದಾನೆ. ಆರೋಪಿಗೆ ಇನ್ನೂ ಜಾಮೀನು ಮಂಜೂರಾಗಿಲ್ಲ.
ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವ ಸಂದರ್ಭ, ಆರೋಪಿಗೆ ಸಾಂತ್ವನ ಹೇಳಿದ ವ್ಯಕ್ತಿಯೊಬ್ಬನು ಆತನ ಹಣೆಗೆ ಮುತ್ತಿಟ್ಟ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವ್ಯಕ್ತಿಯು ಉಜಿರೆ ನಿವಾಸಿಯಾಗಿದ್ದು, ಈತನ ಪತ್ತೆಗಾಗಿ ಬೆಳ್ತಂಗಡಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.










