

ನೆಲ್ಯಾಡಿ: ನೇರ್ಲ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆ ಮತ್ತು ಸಮುದಾಯದ ನಡುವಿನ ಬಾಂಧವ್ಯವನ್ನು ಗಾಢಗೊಳಿಸುವ ಉದ್ದೇಶದಿಂದ ಎರಡನೆಯ ಸಮುದಾಯದತ್ತ ಶಾಲೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.
ಮಾರ್ಗದರ್ಶಕ ಶಿಕ್ಷಕರಾದ ಸತ್ಯನಾರಾಯಣರವರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು.
ಮಾಜಿ ಸೈನಿಕ ಹರಿಶ್ಚಂದ್ರ ಪೂಜಾರಿ, ದಾನಿ ದೇವಿ ಪ್ರಸಾದ್ ಪೊಯ್ಯೆತ್ತಡ್ಡ ಹಾಗೂ ಸೈನಿಕ ಸಂತೋಷ್ ನೇರ್ಲ ಹಾಗೂ ಅತಿಥಿ ಶಿಕ್ಷಕರು, ನಿವೃತ್ತ ಎಸ್‌ಡಿಎಂಸಿ ಸದಸ್ಯರಿಗೆ ಸನ್ಮಾನಿಸಲಾಯಿತು.
ವಿವಿಧ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿಜೇತರಾದವರಿಗೆ ಹಾಗೂ ಕಲಿಕೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ವಸಂತ ಬಿಜೇರು ಅಧ್ಯಕ್ಷತೆಯನ್ನು ವಹಿಸಿದ್ದು, ಉಪಾಧ್ಯಕ್ಷೆ ನಂದಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಡಾ ಗಿರೀಶ್ ಸ್ವಾಗತಿಸಿದರು, ಅತಿಥಿ ಶಿಕ್ಷಕಿ ಆಥಿರಾ ವಂದಿಸಿದರು. ಕು.ಭವ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಸಮಾರಂಭದ ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ಈ ವಿಶೇಷ ದಿನದ ಸಾಕ್ಷಿಯಾಗಿದ್ದರು.










